ಜವಾಹರ್ ನವೋದಯ 6ನೇ ತರಗತಿಗೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿ ಎಸ್. ರೈ ಎರಡನೆಯ ಹಂತದಲ್ಲಿ ಆಯ್ಕೆಯಾಗಿದ್ದಾಳೆ. ಇವಳು ಸೋಣಂಗೇರಿಯ ಸತೀಶ್ ರೈ ಮತ್ತು ಸುಮ ರೈ ದಂಪತಿಗಳ ಪುತ್ರಿ.
ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಇವಳು ಸುಳ್ಯದ ಪ್ರತಿಭಾ ವಿದ್ಯಾಲಯದಲ್ಲಿ ನವೋದಯ ಪರೀಕ್ಷೆಗೆ ತರಬೇತಿ ಪಡೆದಿದ್ದಳು. ಕಳೆದ ವರ್ಷ ನಡೆದ ಪರೀಕ್ಷೆಯಲ್ಲಿ ಗರಿಷ್ಠ ಸಂಖ್ಯೆಯ 28 ಜನ ವಿದ್ಯಾರ್ಥಿಗಳು ಪ್ರತಿಭಾ ವಿದ್ಯಾಲಯದಲ್ಲಿ ಆಯ್ಕೆಯಾಗಿದ್ದಾರೆ. ಈ ವರ್ಷದ ತರಗತಿಗಳು ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದೆಯೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.