ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಕರಾವಳಿ ಪ್ರದೇಶದ ಜನರ ಸ್ವಾಸ್ತ್ಯಕ್ಕಾಗಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಲಾಯಲ್ಟಿ ಕಾರ್ಡ್ ಎಂಬ ಆರೋಗ್ಯ ಪರ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯು ಮಂಗಳೂರಿನ ಅತ್ತಾವರಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಗೆ ಸೀಮಿತವಾಗಿದ್ದು ಈ ಯೋಜನೆಯಡಿಯಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ಸದಸ್ಯನು ಈ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ ಸದಸ್ಯನು ಬಿಲ್ಲಿನ ಮೇಲೆ ೯೦ ಶೇ. ರಿಯಾಯಿತಿಗೆ ಅರ್ಹನಾಗುತ್ತಾನೆ. ಈ ರಿಯಾಯಿತಿಯು ಒಂದು ವರ್ಷಕ್ಕೆ ಒಂದು/ ಹಲವು ಒಳರೋಗಿ ದಾಖಲಾತಿಗೆ ಅನ್ವಯಿಸುತ್ತದೆ. ಮತ್ತು ಒಟ್ಟು ರಿಯಾಯಿತಿಯ ಮೊತ್ತವು ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.೩೫೦೦೦ ಮಾತ್ರ ಆಗಿರುತ್ತದೆ.
ಅದೇ ರೀತಿ ಈ ಯೋಜನೆಯಡಿಯಲ್ಲಿ ಸದಸ್ಯರು ಹೊರ ರೋಗಿ ಸೌಲಭ್ಯಗಳನ್ನು ಕೂಡಾ ಪಡೆದುಕೊಳ್ಳಬಹುದಾಗಿದ್ದು ತಜ್ಞ ವೈದ್ಯರ ಸಮಾಲೋಚನೆಗೆ ೫೦ ಶೇ ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳಿಗೆ ೨೦ ಶೇ ರಿಯಾಯಿತಿ, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ., ಎಕ್ಸ್ರೇ, ಸ್ಕ್ಯಾನಿಂಗ್ ಮತ್ತು ವೈದ್ಯರ ಶುಲ್ಕದ ಮೇಲೆ ೨೦ ಶೇ. ರಿಯಾಯಿತಿ, ಹೊರ ರೋಗಿ ವಿಭಾಗದಲ್ಲಿ ನಡೆಸುವ ಚಿಕಿತ್ಸಾ ವಿಧಾನಗಳು / ಶಸ್ತ್ರ ಚಿಕಿತ್ಸೆಗಳ (ವೃತ್ತಿ ಶುಲ್ಕ ಸೇರಿದಂತೆ) ಮೇಲೆ ೧೦ ಶೇ. ರಿಯಾಯಿತಿ ಹಾಗೂ ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ೧೦ ಶೇ. ರವೆರೆಗೆ ರಿಯಾಯಿತಿಯು ದೊರೆಯುತ್ತದೆ. ಈ ಯೋಜನೆಯ ಸದಸ್ಯರಾಗಲು ವಯಸ್ಸಿನ ಮಿತಿಯು ಇರುವುದಿಲ್ಲ. ೯೧ ದಿವಸದ ಮಗುವಿನಿಂದ ಹಿಡಿದು ೯೦ ವರ್ಷ ವಯಸ್ಸಿನ ಹಿರಿಯ ನಾಗರಿಕರೂ ಕೂಡಾ ಈ ಯೋಜನೆಗೆ ಸೇರಲು ಅವಕಾಶವಿರುತ್ತದೆ. ಈ ಯೋಜನೆಯ ಮೂಲಕ ಹಿರಿಯ ನಾಗರಿಕರೂ ಕೂಡಾ ಉನ್ನತ ಮಟ್ಟದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ಬಾಣಂತನದ ಸವಲತ್ತುಗಳು ಕೂಡ ಲಭ್ಯವಿದ್ದು. ಈ ಬಾಣಂತನದ ಸವಲತ್ತುಗಳು ಮೊದಲೆರಡು ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಯೋಜನೆಗೆ ಸದಸ್ಯರಾಗಲು ಅತೀ ಕಡಿಮೆ ನೋಂದಾವಣಾ ಶುಲ್ಕವನ್ನು ವಿಧಿಸಲಾಗಿದೆ. ಕುಟುಂಬವೊಂದರಲ್ಲಿ ಗರಿಷ್ಠ ೫ ಮಂದಿ ಸದಸ್ಯರು ರೂ.೩೦೦ ಪಾವತಿಸಿ ಯೋಜನೆಯ ಸದಸ್ಯರಾಗಬಹುದು. ಒಂದು ವೇಳೆ ಕುಟುಂಬದಲ್ಲಿ ೫ ಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಪ್ರತೀ ಹೆಚ್ಚುವರಿ ಸದಸ್ಯನಿಗೆ ರೂ. ೧೦೦ ರಂತೆ ನೀಡಿ ನೋಂದಾಯಿಸಿ ಯೋಜನೆಯ ಸೌಲಭ್ಯನ್ನು ಪಡೆದುಕೊಳ್ಳಬಹುದು. ನೋಂದಾಯಿಸಿದ ಕುಟುಂಬಕ್ಕೆ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಸ್ಥಳದಲ್ಲಿಯೇ ನೀಡಲಾಗುವುದು ಮತ್ತು ಯೋಜನೆಯ ಮಾನ್ಯತೆಯು ಕಾರ್ಡಿನಲ್ಲಿ ನಮೂದಿಸಿದ ಪ್ರಾರಂಭದ ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ. ನೋಂದಾವಣೆಯ ಸಮಯದಲ್ಲಿ ಕುಟುಂಬ ಸದಸ್ಯರ ದಾಖಲೆ ಪ್ರತಿಗಳನ್ನು ನಿಡಬೇಕಾಗಿದ್ದು ರೇಶನ್ ಕಾರ್ಡ್ ಅಥವಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಮಾರ್ಕೆಟಿಂಗ್ ವಿಭಾಗದ ಮನಮೋಹನ ದೇವ ತಿಳಿಸಿದ್ದಾರೆ.