ಸವಣೂರಿನಲ್ಲಿ ಮಹೀಂದ್ರ ವಾಹನದಲ್ಲಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಬೆಳ್ಳಾರೆ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ ವಾಹನ ಹಾಗೂ ದನಗಳನ್ನು ವಶಪಡಿಸಿಕೊಂಡ ಘಟನೆ ನ.22 ರಂದು ರಾತ್ರಿ ನಡೆದಿದೆ.
ಕಾಂಚನದಿಂದ ದನಗಳನ್ನು ಖರೀದಿಸಿ ಪುರುಷರಕಟ್ಟೆಗೆ ಒಂದೇ ವಾಹನದಲ್ಲಿ ಎರಡು ದೊಡ್ಡ ದನಗಳನ್ನು ಸಾಗಿಸಲಾಗುತ್ತಿತ್ತು.
ಪರವಾನಿಗೆ ಇಲ್ಲದೆ ದನ ಸಾಗಾಟ ಮಾಡುತ್ತಿದ್ದ ಕೃಷ್ಣ ಭಟ್ ಪಿ.ಮೊಟ್ಟೆತ್ತಡ್ಕ ಹಾಗೂ ಶಿವಪ್ರಸಾದ್ ಎಂಬವರ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನಗಳು ಹಾಗೂ ದನಗಳನ್ನು ಸಾಗಿಸಿದ ವಾಹನ ಬೆಳ್ಳಾರೆ ಠಾಣೆಯಲ್ಲಿದೆ ಎಂದು ತಿಳಿದು ಬಂದಿದೆ.