ಮುರುಳ್ಯ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ನ. ೨೪ರಂದು ಎಣ್ಮೂರು ಮುರುಳ್ಯ ಗ್ರಾಮಗಳು ಸೇರಿದಂತೆ ಎಣ್ಮೂರು ಪಂಚಾಯತ್ ನ ಆಶ್ರಯದಲ್ಲಿ ‘ಹೆಣ್ಣು ಮಗುವನ್ನು ಉಳಿಸಿ ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮ ಮತ್ತು ಶಿಶು ಪ್ರದರ್ಶನ ನಡೆಯಿತು
ಪ್ರಥಮ ದ್ವಿತೀಯ ಮತ್ತು ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಪುಟಾಣಿ ಚುಂಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಮಂದಿರದ ಸಂಚಾಲಕ ವಸಂತ ನಡುಬೈಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕರಾದ ರವಿ ಶ್ರೀ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರಮೀಳಾ, ಮುರುಳ್ಯ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಪೂವಮ್ಮ ಎಣ್ಮೂರು, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ರತ್ನಾವತಿ ಮುರುಳ್ಯ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರೇವತಿ ಅಲೆಕಿ, ಶ್ರೀಮತಿ ಉಷಾ ಮದ್ಕೂರು, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶ್ರೀಮತಿ ಕಿಶೋರಿ ಎಣ್ಮೂರು, ಶ್ರೀಮತಿ ಯಶೋಧ ನರ್ಲಡ್ಕ, ಶ್ರೀಮತಿ ಹೇಮಾವತಿ ಅಲೆಕ್ಕಾಡಿ, ಶ್ರೀಮತಿ ಮೀರಾ ಶಾಂತಿನಗರ ಶ್ರೀಮತಿ ಭವಾನಿ ಮದ್ಕೂರು, ಉಪಸ್ಥಿತರಿದ್ದರು. ಶ್ರೀಮತಿ ಶೀಲಾವತಿ ಗೋಳ್ತಿಲ ಸ್ವಾಗತಿಸಿ, ಶ್ರೀಮತಿ ರತ್ನಾವತಿ ಎಣ್ಮೂರು ವಂದಿಸಿದರು. ಶ್ರೀಮತಿ ನೇತ್ರಾವತಿ ಗೋಳ್ತಿಲ ಕಾರ್ಯಕ್ರಮ ನಿರೂಪಿಸಿದರು.