ಎಣ್ಮೂರು ಕೋಟಿ ಚೆನ್ನಯ ನಗರದಲ್ಲಿರುವ ಶ್ರೀ ಸೀತಾರಾಮಾಂಜನೇಯ ಭಾರತಿ ಮಂದಿರದ ಬ್ರಹ್ಮಕಲಶೋತ್ಸವ ದ ಬಗ್ಗೆ ಪೂರ್ವಭಾವಿ ಸಭೆಯು ಮಂದಿರದ ಅಧ್ಯಕ್ಷ ಕೆ. ಎಸ್. ರಘುನಾಥ ರೈಯವರ ಅಧ್ಯಕ್ಷತೆಯಲ್ಲಿ ನ. 24 ರಂದು ಮಂದಿರದ ವಠಾರದಲ್ಲಿ ನಡೆಯಿತು.
ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆಶೀರ್ವಚನ ನೀಡಿದರು., ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕುರಿತು ವಿಚಾರ ವಿಮರ್ಶೆ ಮಾಡುತ್ತಾ ಎಲ್ಲರನ್ನು ಒಗ್ಗೂಡಿಸಿಕೊಂಡು ಸಮಿತಿ ರಚಿಸಬೇಕು ಎಂದರು.
ನಂತರ ಮನವಿಯನ್ನು ಬಿಡುಗಡೆಗೊಳಿಸಿದರು. ಅವರ ಮಾರ್ಗದರ್ಶನದಂತೆ ಉಪಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಸದಸ್ಯ ಎಸ್. ಎನ್. ಮನ್ಮಥ, ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಪಿ.ಜಿ.ಎಸ್. ಎನ್. ಪ್ರಸಾದ್, ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯರಾದ ವೆಂಕಟರಮಣ ರಾವ್ ಮಂಕುಡೆ , ವಸಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಚಂದ್ರ ರೈ ಕುಂಜಾಡಿ, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನ ಸಮಿತಿಯ ಮಾಜಿ ಸದಸ್ಯ ವೆಂಕಪ್ಪ ಗೌಡ ಆಲಾಜೆ, ಒಡಿಯೂರು ಗ್ರಾಮವಿಕಾಸ ಪಂಜ ವಲಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ವೇದಿಕೆಯಲ್ಲಿದ್ದರು.
ಫೆ. ೧೬, ೧೭ ರಂದು ಬ್ರಹ್ಮಕಲಶೋತ್ಸವ ನಡೆಸುವುದೆಂದು ನಿರ್ಣಯಿಸಲಾಯಿತು. ಪ್ರಕಾಶ್ ರೈ ಕುಳೈತೋಡಿ ಪ್ರಾರ್ಥಿಸಿದರು. ಪ್ರಫುಲ್ಲ ಚಂದ್ರ ರೈ ಕುಂಜಾಡಿ ಸ್ವಾಗತಿಸಿ, ಸುದೀನ್ ಕುಮಾರ್ ಗುತ್ತು ವಂದಿಸಿದರು. ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.