ಗ್ರೀನ್ ಸ್ಟಾರ್ ಮುಡೂರು ಇದರ ಆಶ್ರಯದಲ್ಲಿ ಎರಡನೆಯ ಆವೃತ್ತಿಯ ಜಿಎಸ್ಎಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ನ.21ರಂದು ಮೂರೂರು ಶಾಲಾ ಮೈದಾನದಲ್ಲಿ ನಡೆಯಿತು.
ಕೋವಿಡ್ ನಿಬಂಧನೆಗಳನ್ನು ಪಾಲಿಸಿ ಪಂದ್ಯಾ ಕೂಟ ನಡೆಯಿತು.
ಐದು ತಂಡಗಳು ಭಾಗವಹಿಸಿದ ಲೀಗ್ ಮಾದರಿಯ ಪಂದ್ಯಾ ಕೂಟದಲ್ಲಿ ಆರಿಫ್ ಮುಡೂರು ಮಾಲಕತ್ವದ ಅಶ್ರಫ್ ಮುಡೂರ್ ಮತ್ತು ಅಬೂತಾಹಿರ್ ಪಂಜಿಕಲ್ಲು ಸಾರಥ್ಯದ ಸ್ಕೋಬೋ ಫೈಟರ್ಸ್ ತಂಡವು ಚಾಂಪಿಯನ್ ಪಟ್ಟ ಪಡೆದು ಕೊಂಡಿತು.
ಅಮ್ಮಿ ಮುಡೂರ್ ಮಾಲಕತ್ವದ ಸಾಧಿಕ್ ಪಂಜಿಕಲ್ಲು ಮತ್ತು ಝುಬೈರ್ ಮುಡೂರ್ ಸಾರಥ್ಯದ ಗೋಲ್ಡನ್ ಜಾತಿಕ್ಕಾಡ್ ತಂಡವು ದ್ವಿತೀಯ ಸ್ಥಾನವನ್ನು ಪಡಕೊಂಡಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಯೂಸುಫ್ ಹಾಜಿ ಮೂರೂರು, ಹನೀಫ್ ಬಿ.ಎಚ್, ಮಜೀದ್ ಕೆಎಂ, ಸಂಘಟಕರಾದ ರಫೀಕ್ ಪಿ.ಎಂ, ಕಲೀಲ್ ಜಿಎಸ್ಎಂ, ರಫೀಕ್ ಎಂ.ಎಸ್ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಅಜೀಜ್ ಎಂ ವೈ ವೀಕ್ಷಕ ವಿವರಣೆ ನೀಡಿ ಸ್ವಾಗತಿಸಿ ವಂದಿಸಿದರು.