ಸುಳ್ಯ ನಗರದ ಮುಖ್ಯರಸ್ತೆಯ ಕೆಲವು ತರಕಾರಿ , ಹಣ್ಣು ಹಂಪಲು, ವಸ್ತ್ರ ಮಳಿಗೆ ಹಾಗೂ ಕೆಲವು ವ್ಯಾಪಾರ ಮಳಿಗೆಗಳು ಪುಟ್ ಪಾತ್ ನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದರು. ಅಂತಹ ಅಂಗಡಿಗಳಿಗ ಮಾಲಿಕರಿಗೆ ಎಚ್ಚರಿಕೆ ನೀಡಿ ತಮ್ಮ ಸಾಮಾಗ್ರಿಗಳನ್ನು ಸಾರ್ವಜನಿಕರು ನಡೆದಾಡುವ ಪುಟ್ಫಾತ್ ಗಳ ಮೇಲೆ ಇರಿಸಿ ವ್ಯಾಪಾರ ಮಾಡಬಾರದು ಕೂಡಲೇ ತರೆವುಗೋಳಿಸಲು ಸೂಚನೆ ನೀಡಿ ತೆರವುಗೊಳಿಸಿದ್ದಾರೆ.
ಕೆಲವು ವಿಶಾಲ ಮಳಿಗೆಗಳು ಮೆಟ್ಟಿಲುಗಳನ್ನು ಪೂಟ್ಬಾತ್ನಲ್ಲಿ ನಿರ್ಮಿಸಿದ್ದು ಅವುಗಳನ್ನು ಕೂಡಾ ತೆರವುಗೊಳಿಸುವಂತೆ ಸಂಬಂಧಪಟ್ಟ ಕಟ್ಟಡ ಮಾಲಕರಿಗೆ ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬಿದಿಬದಿ ವ್ಯಾಪರಸ್ಥರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ
ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.