ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ ಪ್ರಯುಕ್ತ ದೀಪಸ್ಥಾಪನೆ ನ.25 ರಂದು ಬೆಳಿಗ್ಗೆ ನಡೆಯಿತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಮತ್ತು ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕರವರರು “ದೀಪಸ್ಥಾಪನೆ” ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು, ಸದಸ್ಯರಾದ ಎನ್.ಶ್ರೀನಿವಾಸ ರಾವ್,ಮಹಾಬಲ ಟೈಲರ್,ಭಾಸ್ಕರನ್ ನಾಯರ್,ಗಣೇಶ ಆಚಾರ್ಯ,
ಅರ್ಚಕ ಪುರೋಹಿತ ನಾಗರಾಜ ಭಟ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.