ದುಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆಶ್ರಯದಲ್ಲಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.ಮಂಗಳೂರು ಮತ್ತು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಸುತ್ತಿನ ಜಾನುವಾರುಗಳ ಸಾಮೂಹಿಕ ಜಂತುಹುಳಗಳ ನಿವಾರಣಾ ಕಾರ್ಯಕ್ರಮ ನ.26ರಂದು ದುಗಲಡ್ಕ ಹಾಲು ಸೊಸೈಟಿ ವಠಾರದಲ್ಲಿ ನಡೆಯಿತು.
ದ.ಕ.ಹಾಲು ಒಕ್ಕೂಟದ ನಿರ್ದೇಶಕ,ಪಾಣಾಜೆ ಹಾಲು ಸೊಸೈಟಿ ಅಧ್ಯಕ್ಷರಾದ ನಾರಾಯಣ ಪ್ರಕಾಶ್ ರವರು ಮುಖ್ಯ ಅತಿಥಿಯಾಗಿ ಮಾತನಾಡಿ ಹೈನುಗಾರ ಕೃಷಿಕರು ಗುಣಮಟ್ಟದ ಹಾಲುಗಳನ್ನು ಪೂರೈಕೆ ಮಾಡಿ ಹೆಚ್ಚು ಲಾಭ ಗಳಿಸುವುದರೊಂದಿಗೆ ಒಕ್ಕೂಟಕ್ಕಿರುವ ಒಳ್ಳೆಯ ಹೆಸರು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಎಂದರು.ದ.ಕ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ ಯವರು ಜಾನುವಾರುಗಳ ಜಂತುಹುಳಗಳ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ಪುರುಷೋತ್ತಮ ಗೌಡ ಕೊಯಿಕುಳಿಯವರಿಗೆ ಸಾಂಕೇತಿಕವಾಗಿ ಜಂತುಹುಳದ ಮಾತ್ರೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದುಗಲಡ್ಕ ಹಾಲು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೇಶವ ಸ್ವಾಗತಿಸಿದರು. ನಿರ್ದೇಶಕಿ ಶ್ರೀಮತಿ ಜಲಜಾಕ್ಷಿ ಗಿರಿಧರ್ ವಂದಿಸಿದರು.ಉಪಾಧ್ಯಕ್ಷೆ ಶ್ರೀಮತಿ ಉಷಾ ಶಿವರಾಮ,ನಿರ್ದೇಶಕಿ ವಾರಿಜ ಕೊರಗಪ್ಪ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರಿಯಾ, ಸಹಾಯಕಿ ಶ್ರೀಮತಿ ಅರುಣಾ ಸಹಕರಿಸಿದರು.ಸಂಘದ ಸದಸ್ಯರು ಉಪಸ್ಥಿತರಿದ್ದರು.