ಲೋಕೇಶ್ ಮೊಗಪ್ಪೆ ಮತ್ತು ಶಶಿಕುಮಾರ್ ಮಾಲಕತ್ವದ ಸಿಂಚನಾ ಡೆವಲಪ್ಲರ್ಸ್
ರಬ್ಬರ್ ಖರೀದಿ ಕೇಂದ್ರ ನ. 22. ರಂದು ಬೆಳ್ಳಾರೆ ಮೇಲಿನ ಪೇಟೆಯ ಮೊಯಿದೀನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಶ್ರೀನಿವಾಸ ಭಟ್ ಪೆರುವಾಜೆ ಗಣಪತಿ ಗೋಮ ನೆರವೇರಿಸಿದರು. ಶಶಿಕುಮಾರ್ ಮತ್ತು ಲೋಕೇಶ್ ರವರ ತಾಯಿ ಶ್ರೀಮತಿ ಅನ್ನಲಕ್ಷ್ಮಿ ಮತ್ತು ತಂದೆ ರಾಮರ್ ಮೊಗಪ್ಪೆ ದೀಪ ಬೆಳಗಿಸಿ ಉದ್ಘಾಟಿಸಿದರು. ಉದಯಕುಮಾರ್ ಮೊಗಪ್ಪೆ, ಸಿನ್ನರಾಸ್ ಮೊಗಪ್ಪೆ, ಪ್ರವೀಣ್ ಮೊಗಪ್ಪೆ, ಪ್ರವೀಣ್ ಪೆರ್ಲಂಪಾಡಿ, ಪ್ರವೀಣ್ ಮಣಿಮಜಲು, ನಯನಕುಮಾರ್ ಪೆರುವಾಜೆ,
ಭವಿಷ್ಯ ಅಟೋಲಿಂಕ್ಸ್ ಮಾಲಕರಾದ ಸದಾಶಿವ ಕೂಡನಕಟ್ಟೆ, ರಾಜೇಶ್ ಐವರ್ನಾಡು, ಪ್ರಕಾಶ್ ಮೊಗಪ್ಪೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಲ್ಲಿ ಗ್ರೇಡ್ ರಬ್ಬರ್, ಲೋಟ್ ರಬ್ಬರ್ ಮತ್ತು ರಬ್ಬರ್ ಸ್ಕ್ರಾಪ್ ಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದೆಂದು ಮಾಲಕರು ತಿಳಿಸಿದರು.