ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವ
ಶಾಮಿಯಾನ ತೆಗೆಸಿದ ಪೋಲೀಸರು : ಗಿಡದಡಿಯಲ್ಲಿ ಬಿಸಿಲಿನ ಮಧ್ಯೆ ನಡೆಯುತ್ತಿರುವ ಸಭೆ
ಕಸ್ತೂರಿ ರಂಗನ್ ವರದಿಯ ಅನುಷ್ಠಾನ ದ ವಿರುದ್ದ ಪ್ರತಿಭಟನಾ ಸಭೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಇಂದು ನಡೆಯುತ್ತಿದೆ.
ಸುಳ್ಯದ ತಾಲೂಕು ಕಚೇರಿಯ ಎದುರಿನಲ್ಲಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಭಾನುಪ್ರಕಾಶ್ ಪೆರುಮುಂಡ, ಕಿಶೋರ್ ಶಿರಾಡಿ, ಜಯರಾಮ ಕಟ್ಟೆಮನೆ, ಭರತ್ ಕನ್ನಡ್ಕ, ಸತೀಶ್ ಟಿ.ಎನ್., ಎನ್.ಜಯಪ್ರಕಾಶ್ ರೈ, ಎಂ.ವೆಂಕಪ್ಪ ಗೌಡ, ಪ್ರಸಬ್ನ ಕುಮಾರ್ ಎಣ್ಮೂರು, ದಿವಾಕರ ಪೈ, ಲಕ್ಷ್ಮೀಶ್ ಗಬಲಡ್ಕ, ರವೀಂದ್ರ ಕುಮಾರ್ ರುದ್ರಪಾದ ಸೇರಿದಂತೆ ಮೊದಲಾದವರಿದ್ದರು.
ಸಭೆ ಮಧ್ಯಾಹ್ನ ದವರೆಗೆ ನಡೆಯುವುದರಿಂದ ಬಿಸಿಲಿನಿಂದ ತಪ್ಪಿಸಿಕೊಳ್ಳಲೆಂದು ಸಂಘಟಕರು ಶಾಮಿಯಾನ ಹಾಕುಲು ಮುಂದಾಗಿ, ಹಾಕುತ್ತಿದ್ದಾಗ ಸ್ಥಳದಲ್ಲಿದ್ದ ಪೋಲೀಸರು ಅದಕ್ಕೆ ತಡೆ ಮಾಡಿ, ಶಾಮಿಯಾನ ತೆಗೆಸಿದರೆಂದು ತಿಳಿದು ಬಂದಿದೆ. ಬಳಿಕ ತಾಲೂಕು ಕಚೇರಿ ಎದುರು ಇರುವ ಸಣ್ಣ ಗಿಡಗಳ ಕೆಳಗೆ ಚಯರ್ ಹಾಕಿ ಪ್ರತಿಭಟನಾ ಭಾಷಣ ಆರಂಭಗೊಂಡಿತು.