ಸುಬ್ರಹ್ಮಣ್ಯದಲ್ಲಿ ಪರ್ವತ ಮುಖಿ ಪ್ರೆಂಡ್ಸ್ ಮತ್ತು ಜೆಸಿಐ ಸುಬ್ರಹ್ಮಣ್ಯ ಅವರು ನಡೆಸುತ್ತಿರುವ ವಾರದ ಶ್ರಮದಾನಕ್ಕೆ ಇಂದು ಎಸಿ ಯತೀಶ್ ಉಳ್ಳಾಲ್ ಭೇಟಿ ನೀಡಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಲ್ಲಾಳ್ ಇಂದು ಭೇಟಿ ನೀಡಿ ಕುಮಾಧಾರ ವ್ಯಾಪ್ತಿಯಲ್ಲಿ ಪರ್ವತ ಮುಖಿ ಪ್ರೆಂಡ್ಸ್ ಮತ್ತು ಜೆಸಿಐ ನಡೆಸಿದ ಸ್ಚಚ್ಚತಾ ಕಾರ್ಯವನ್ನು ವೀಕ್ಷಿಸಿದರು. ಈ ಸಂದರ್ಭ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.