ಸುಳ್ಯ ಜೆಒಸಿ ಸ್ಟೈಕರ್ಸ್ ಇದರ ವತಿಯಿಂದ ಶಾಂತಿನಗರ ಕ್ರೀಡಾಂಗಣದಲ್ಲಿ ಸ್ಟಿಚ್ ಬಾಲ್ ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಟ ನ.೨೯ ರಂದು ನಡೆಯಿತು.
ತಾಜುದ್ದೀನ್ ಜನಪ್ರಿಯ ಮಾಲಕತ್ವದ ಕ್ರಿಕೆಟ್ ಜನಪ್ರಿಯ ಪೈಂಟ್ಸ್ ತಂಡ,ಕಿರಣ್ ಕುಂಟಕಾಡು ಮಾಲಕತ್ವದ ನಾಷ್ ತೊಡಿಕಾನ,ಪ್ರದೀಪ್ ಕೊಲ್ಚಾರ್ ಮಾಲಕತ್ವದ ಕೊಲ್ಚಾರ್ ಟೈಗರ್ಸ್, ತೌಹಿದ್ ಹೋಮ್ ಗ್ಯಾಲರಿ ಮಾಲಕತ್ವದ ಡೊಮಿನಟರ್ಸ್ ತಂಡಗಳ ಮಧ್ಯೆ ಲೀಗ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು.
ಪ್ರಥಮ ಸ್ಥಾನವನ್ನು ಡೊಮಿನಟರ್ಸ್ ಸುಳ್ಯ ಪಡೆಯಿತು. ದ್ವಿತೀಯ ಸ್ಥಾನವನ್ನು ನಾಷ್ ತೊಡಿಕಾನ ಪಡೆದುಕೊಂಡಿತು.
ಪಂದ್ಯಾಟ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ರಮೀಝ್ ,ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮನು ಆಚಾರ್ಯ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮನು ಆಚಾರ್ಯ ಪಡೆದು ಕೊಂಡರು.
ಪಂದ್ಯಾಟವನ್ನು ಜಾಕೀರ್ ಜೆಓಸಿ ಸ್ಟ್ರೈಕರ್, ಮನು ಅಚಾರ್ಯ,ತೌಹೀದ್ ಹೋಮ್ ಗ್ಯಾಲರಿ,ತಾಜ್ ಜನಪ್ರಿಯ ಆಯೋಜಿಸಿದರು.