ಡಿ.10 ರಂದು ತಾಲೂಕು ಕಛೇರಿ ಎದುರು ಸಾಂಕೇತಿಕ ಪ್ರತಿಭಟನೆ
ಗ್ರಾ.ಪಂ ಚುನಾವಣೆ ನಂತರ ಬೃಹತ್ ಹೋರಾಟಕ್ಕೆ ನಿರ್ಧಾರ
ಸರಕಾರಿ ಆಸ್ಪತ್ರೆ ಬಲಪಡಿಸಿ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಹೋರಾಟ ಸಮಿತಿಯ ಸಭೆಯು ದ .1 ರಂದು ಸುಳ್ಯ ಅಂಬೆಟಡ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆಯಿತು.
ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಂಖಡರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಸುಳ್ಯ ತಾಲೂಕು ಸಿಐಟಿಯು ಅಧ್ಯಕ್ಷ ಕೆ.ಪಿ ಜಾನಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಢರೇಷನ್ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ “ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರಬೇಕಾದ ಸೌಕರ್ಯಗಳ ಬಗ್ಗೆ ತಜ್ಞ ವೈದ್ಯರುಗಳ ಬಗ್ಗೆ ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಸಮುದಾಯ ಆಸ್ಪತ್ರೆಗಳ ಬಗ್ಗೆ ಮತ್ತು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಮೀಸಲಿರಿಸಿದ ಜಾಗದಲ್ಲಿ ಸೀಫುಡ್ ಪಾರ್ಕ್ ಮಾಡಲು ನಡೆಸಿದ ಹುನ್ನಾರಗಳ ಬಗ್ಗೆ ಮತ್ತು ತಮ್ಮ ಹೋರಾಟದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯಕ್ಕೆ ಸಂಭಂಧಿಸಿದ ಹಕ್ಕುಗಳನ್ನು ಪಡಕೊಳ್ಳಲು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಕರೆಕೊಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಎ.ಎ.ಪಿ ಸಂಚಾಲಕ ಅಶೋಕ್ ಎಡಮಲೆ ,ಸುಳ್ಯ ವಕೀಲರ ಸಂಘದ ಎಂ.ವೆಂಕಪ್ಪ ಗೌಡ , ಜೆಡಿಎಸ್ ನಾಯಕ ಅಶ್ರಫ್ ಕಲ್ಲೇಗ ,ಕರ್ನಾಟಕ ರಕ್ಷಣಾವೇದಿಕೆಯ ಕಲಂದರ್ ಎಲಿಮಲೆ, ರಶೀದ್ ಜಟ್ಟಿಪ್ಪಳ್ಳ, ರೈತ ಸಂಘದ ತಾಲೂಕು ಕಾರ್ಯದರ್ಶಿ ಭರತ್, ಡಿವೈಎಪೈ ತಾಲೂಕು ನಾಯಕ ಭರತ್ ಕುಕ್ಕುಜಡ್ಕ, ಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ದೀಕ್ ,ಕಲ್ಲುಗುಂಡಿ ಸಹಕಾರೀ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ,ಎಸ್ ಎಂ ಎ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ,ಸುಳ್ಯ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಹೆಚ್.ಕೆ,ಜೊತೆ ಕಾರ್ಯದರ್ಶಿ ಶಿವರಾಮ ಗೌಡ ,ಉಪಾದ್ಯಕ್ಷ ಮಂಜುನಾಥ್ ಬಳ್ಳಾರಿ , ಕಟ್ಟಡ ಕಾರ್ಮಿಕ ಸಂಘದ ಸಂಪಾಜೆ ವಲಯಾಧ್ಯಕ್ಷ ಶ್ರೀಧರ ಕಡೆಪಾಲ , ಕೋಶಾಧಿಕಾರಿ ಪ್ರಸಾದ್.ವಿ.ಆರ್,ಸಾಮಾಜಿಕ ಧುರೀಣ ರಫೀಕ್ ಪಡು,ಕಬೀರ್ ಜಟ್ಟಿಪಳ್ಳ, ಎ.ಕೆ ಹಸೈನಾರ್,ಡಿ.ಎಂ ಶಾರಿಕ್,ಮಂಜುನಾಥ್ ಮಡ್ತಿಲ, ಶಶಿಕುಮಾರ್ ,ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಡಿ.೧೦ ರಂದು ತಾಲೂಕು ಕಛೇರಿಯ ಎದುರು ಸಾಂಕೇತಿಕ ಪ್ರತಿಭಟನೆ ನಡೆಸುವುದು ಅಲ್ಲದೆ ಗ್ರಾ.ಪಂ ಪಂಚಾಯತ್ ಚುನಾವಣಾ ನಂತರ ಬೃಹತ್ ಹೋರಾಟ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.