ಕೊರೋನಾ ಹಿನ್ನಲೆಯಲ್ಲಿ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಾಧ್ಯವಾಗದ ವೃತಧಾರಿಗಳಿಗೆ ಶಬರಿಮಲೆ ಪ್ರಸಾದವನ್ನು ಬುಕ್ ಮಾಡಲು ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ರೂ. 450 ಪಾವತಿಸಿದ್ದಲ್ಲಿ ಶಬರಿಮಲೆ ಪ್ರಸಾದ ಮನೆ ಬಾಗಿಲಿಗೆ ಬರಲಿದೆ. ಪ್ರಸಾದದ ಕಿಟ್ನಲ್ಲಿ ಅರವಣ, ತುಪ್ಪ, ಕುಂಕುಮ, ಅರಿಶಿನ ವಿಭೂತಿ ಮತ್ತು ಅರ್ಚನೆಯ ಪ್ರಸಾದ ಇರಲಿದೆ. ಹೆಚ್ಚಿನ ಮಾಹಿತಿಗೆ ಸುಳ್ಯ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.