ವಿವಾದ ಸುಖಾಂತ್ಯ ಸಂಭವ
ಸುಳ್ಯದಲ್ಲಿ ಹಲವು ತಿಂಗಳುಗಳಿಂದ ವಿವಾದದಲ್ಲಿದ ಆಸಿಯಾ-ಖಲೀಲ್ ಕಟ್ಟೆಕ್ಕಾರ್ ವಿವಾಹ ಪ್ರಕರಣ ಸುಖಾಂತ್ಯಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಈ ಕುರಿತು ಭರವಸೆಯ ಮಾತುಕತೆ ಸುಳ್ಯ ಗಾಂಧಿನಗರ ಮುನ್ವವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಡಿ.1 ರಂದು ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಕಟ್ಟೆಕ್ಕಾರ್ ಕುಟುಂಬದ ಹಿರಿಯರಾದ ಉಮ್ಮರ್ ಹಾಜಿ, ಖಲೀಲ್ ತಂದೆ ಅಬ್ದುಲ್ಲಾ ಹಾಜಿ, ಗಾಂಧಿನಗರ ಜಮಾಯತ್ ಕಮಿಟಿ ಸದಸ್ಯರು ಹಾಗೂ ಸುಳ್ಯ ತಾಲೂಕಿನ ವಿವಿಧ ಸುನ್ನಿ ಸಂಘಟನೆಯ ಪಧಾದಿಕಾರಿಗಳು, ಕಟ್ಟೆಕ್ಕಾರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಖಲೀಲ್ ಮತ್ತು ಅಸಿಯಾ ರವರನ್ನು ಒಂದೇ ಕಡೆ ಸೇರಿಸಿ ಮಾತುಕತೆ ನಡೆಸಿ ಸುಖಾಂತ್ಯಗೊಳಿಸುವುದರ ಬಗ್ಗೆ ಮಾತುಕತೆ ನಡೆಯಿತೆನ್ನಲಾಗಿದೆ.
ಡಿ.೯ ರಂದು ಖಲೀಲ್ನ್ನು ಸಭೆಯ ನಡೆಯುವ ಸ್ಥಳಕ್ಕೆ ಕರೆದುಕೊಂಡು ಬಂದು ಸಮಸ್ಯೆಯನ್ನು ಬಗೆಹರಿಸುವ ಎಂದು ಅಬ್ದುಲ್ಲಾ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.