ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಯುವತಿ ಸುಹಾನರನ್ನು ಪುತ್ತೂರಿನಿಂದ ಬೆಂಗಳೂರಿಗೆ ಸೇರಿಸಲು ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಜೀರೋ ಟ್ರಾಫಿಕ್ ಮೂಲಕ ಬೆಂಗಳೂರು ವೈದೇಹಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದವರಲ್ಲಿ ಸುಳ್ಯ ಮೂಲದ ಕಲ್ಲುಗುಂಡಿ ನಿವಾಸಿ ಸಲೀಂ ಟರ್ಲಿ ಯವರೂ ಒಬ್ಬರು.
ಆಲ್ ಇಂಡಿಯಾ ಕೆ.ಎಂ.ಸಿ.ಸಿ. ಟ್ಯೂಮಕೇರ್ ಸಂಚಾಲಕರಾಗಿರುವ ಇವರು ಕೆ.ಎಂ.ಸಿ.ಸಿ ಆಂಬುಲೆನ್ಸ್ ನಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬಂದು ಅದೇ ಆಂಬುಲೆನ್ಸ್ನಲ್ಲಿ ಪೇಶಂಟ್ ಸುಹಾನರನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಜತೆಯಲ್ಲಿ ಹೋಗಿದ್ದರು.
ಪುತ್ತೂರಿನಿಂದ ಹೊರಟ ಆಂಬುಲೆನ್ಸ್ನಲ್ಲಿ ಸಂಚರಿಸುವ ಸಂದರ್ಭದಲ್ಲಿ ಸಾರ್ವಜನಿಕ ರೊಂದಿಗೆ ಪೋಲಿಸ್ ಇಲಾಖೆ ಯೊಂದಿಗೆ ವಾಹನ ಚಾಲಕರೊಂದಿಗೆ ನಿರಂತರವಾಗಿ ಸಂಪರ್ಕಹೊಂದಿ ಎಲ್ಲರೊಂದಿಗೆ ಜೀವ ಉಳಿಸಲು ಸಹಕರಿಸಲು ಮನವಿ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅರಂತೋಡಿನ ಸಂಸುದ್ದೀನ್ ಕೆ.ಎಂ.ಸಿ.ಸಿ. ಬೆಂಗಳೂರುರವರು ಇವರೊಂದಿಗೆ ಸಹಕರಿಸಿದರು.