ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರದ ಬ್ರಹ್ಮಕಲಶೋತ್ಸವವು ಫೆ.16 ಮತ್ತು 17 ರಂದು ನಡೆಯಲಿರುವ ಪ್ರಯುಕ್ತ ಸಮಿತಿ ಪದಾಧಿಕಾರಿಗಳು ನ.30 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಯವರ ಆಶೀರ್ವಾದ ಪಡೆದು ಸಲಹೆಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ರಘುನಾಥ ರೈ ಕಟ್ಟಬೀಡು, ಸದಸ್ಯ ನೂಜಿ ಆನಂದ ಗೌಡ ಆರೆಂಬಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎನ್.ಜಿ.ಲೋಕನಾಥ ರೈ ಎಣ್ಮೂರು, ಅರ್ಗುಡಿ ವಿಶ್ವನಾಥ ರೈ ಬೀದಿಗುಡ್ಡೆ, ಗಣೇಶ್ ಅಲೆಕ್ಕಾಡಿ ಇನ್ನಿತರರು ಉಪಸ್ಥಿತರಿದ್ದರು.