ಸಾಮಾಜಿಕ ಧುರೀಣರಾದ ತೊಡಿಕಾನದ ದೊಡ್ಡಡ್ಕ ನಿವಾಸಿ ಉರಿಮಜಲು ವಸಂತ ಭಟ್ ರವರು ಅಸೌಖ್ಯದ ಕಾರಣದಿಂದಾಗಿ ಇಂದು ಮುಂಜಾನೆ ನಿಧನರಾದರು.
ಅವರಿಗೆ ಸುಮಾರು ಎಪ್ಪತ್ತು ವರ್ಷ ವಯಸ್ಸಾಗಿತ್ತು. ಸದಾ ಸಾರ್ವಜನಿಕ ಕೆಲಸಗಳ ಬಗ್ಗೆ ಚಿಂತಿಸುತ್ತಾ, ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಒತ್ತಾಯಿಸುತ್ತಾ, ರೈತ ಪರ ಚಿಂತನೆ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿದ್ದ, ಪ್ರಗತಿಪರ ಕೃಷಿಕರಾದ ತೊಡಿಕಾನ ವಸಂತ ಭಟ್ ರವರು ಅಸೌಖ್ಯದ ಕಾರಣ ಕ್ಕಾಗಿ 3 ದಿನಗಳ ಹಿಂದೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಅವರ ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಚಿಕಿತ್ಸೆ ಪಡೆಯುತ್ತಾ ಲವಲವಿಕೆಯಿಂದಲೇ ಇದ್ದ ಅವರು ಇಂದು ಮುಂಜಾನೆ ದಿಢೀರನೆ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ತಿಳಿದುಬಂದಿದೆ.
ಪತ್ನಿ ಮತ್ತು ನಾಲ್ವರು ಮಕ್ಕಳನ್ನು, ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಸುಳ್ಯ ತಾಲೂಕಲ್ಲಿ ಅಡಿಕೆಗೆ ಹಳದಿ ರೋಗ ಬಂದು ಅಡಿಕೆ ಕೃಷಿಕರು ಚಿಂತಾಕ್ರಾಂತರಾಗಿರುವ ತಾಳೆ ಬೆಳೆಯನ್ನು ತನ್ನ ತೋಟದಲ್ಲಿ ಆರಂಭಿಸಿ ತಾಲೂಕಿಡೀ ಜನಜಾಗೃತಿಗಾಗಿ ಇವರು ಓಡಾಡುತ್ತಿದ್ದರು.