ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭರವಸೆ ಹಿನ್ನಲೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನಿರ್ಧಾರ ಪ್ರಕಟ ಮುಂದೂಡಿದ ಅಸಮಾಧಾನಿತರು

ಪತ್ರಿಕಾಗೋಷ್ಠಿ ಬದಲಿಗೆ ಸಭೆ ನಡೆಸಿ ಚರ್ಚೆ

ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಬಳಿಕ ಸುಳ್ಯ ಬಿಜೆಪಿಯೊಳಗೆ ಉಂಟಾಗಿರುವ ಆಂತರಿಕ ಅಸಮಾಧಾನವನ್ನು ಶಮನಗೊಳಿಸುವ ಯತ್ನ ಫಲಕಾಣದ ಹಿನ್ನಲೆಯಲ್ಲಿ ಅಸಮಾಧಾನಿತರು ಬಹಿರಂಗವಾಗಿಯೇ ತಮ್ಮ ನಿರ್ಧಾರಗಳನ್ನು ಪ್ರಕಟಿಸಲೆಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದು, ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಸಮಾಧಾನಿತ ಗುಂಪಿನ ನಾಯಕರಿಗೆ ಫೋನ್ ಕರೆ ಮಾಡಿ ಭರವಸೆ ನೀಡಿದ ಹಿನ್ನಲೆಯಲ್ಲಿ ಈ ವಿದ್ಯಮಾನ ನಡೆದಿರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಸಂದರ್ಭ ಸುಳ್ಯದಲ್ಲಿ ಅಡ್ಡ ಮತದಾನ ನಡೆದ ಹಿನ್ನಲೆಯಲ್ಲಿ ಕೆ.ಎಸ್.ದೇವರಾಜ್ ವಿಜಯಿಯಾಗಿ ವೆಂಕಟ್ ದಂಬೆಕೋಡಿ ಪರಾಭವ ಗೊಂಡಿದ್ದರು. ಈ ವಿದ್ಯಮಾನ ಪಕ್ಷದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಅಡ್ಡ ಮತದಾನ ಮಾಡಿದವರು ಯಾರೆಂದು ಕಂಡುಹಿಡಿಯುವ ಯಾವುದೇ ಪ್ರಯತ್ನವೂ ಯಶ ಕಂಡಿರಲಿಲ್ಲ. ಕೊನೆಗೆ ಕಾನತ್ತೂರು ನಾಲ್ವರ್ ದೈವಸ್ಥಾನಕ್ಕೆ ಹೋಗಿ ಪ್ರಮಾಣ ಮಾಡಿದ್ದೂ ಆಗಿತ್ತು. ಅಲ್ಲೂ ಪ್ರಕರಣ ತಾರ್ಕಿಕ ಅಂತ್ಯ ಕಾಣದಿದ್ದಾಗ ಎಲ್ಲಾ ೧೭ ಮಂದಿ ಕೂಡಾ ತಾವು ಆಯ್ಕೆಗೊಂಡ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂಬ ಸೂಚನೆ ಬಂತು. ಅನೇಕರು ಇದನ್ನು ಅನುಸರಿಸಿದರು. ಉಳಿದವರು ಸಮ್ಮತಿ ತೋರಲಿಲ್ಲ. ಮತ್ತೊಂದೆಡೆ ಕಾನತ್ತೂರಿನಲ್ಲಿ ಪ್ರಮಾಣ ಮಾಡಿದ ಬಳಿಕವೂ ಇಂತಹ ಉಪಕ್ರಮಕ್ಕೆ ಮುಂದಾದ ನಾಯಕರ ಕ್ರಮದ ವಿರುದ್ದ ಆಂತರಿಕವಾಗಿ ಅಸಮಾಧಾನವೂ ಭುಗಿಲೇಳ ತೊಡಗಿತ್ತು. ಈ ಮಧ್ಯೆ ನಡೆದ ನೆಲ್ಲೂರು ಕೆಮ್ರಾಜೆ ಸೊಸೈಟಿಯ ವಿದ್ಯಮಾನಗಳೂ ಕೂಡ ಇದರೊಂದಿಗೆ ತಳುಕು ಹಾಕಲ್ಪಟ್ಟಿತು. ಹಲವರನ್ನು ಪಕ್ಷದ ಚಟುವಟಿಕೆಗಳಿಂದ ದೂರ ಇರಿಸುವ ನಿರ್ಧಾರ ಪ್ರಕಟಿಸಲಾಯಿತು.
ಇದರಿಂದ ಮತ್ತಷ್ಟು ಅಸಮಾಧಾನಗೊಂಡವರು ಪಕ್ಷದ ಜಿಲ್ಲೆ ಹಾಗೂ ರಾಜ್ಯದ ವರಿಷ್ಠರಿಗೆ ದೂರು ನೀಡಿದರು. ಜಿಲ್ಲಾ ನಾಯಕರ ಉಪಸ್ಥಿತಿಯಲ್ಲಿ ಮಾತುಕತೆ ನಡೆದಾಗ ಎಸ್.ಎನ್.ಮನ್ಮಥ ಹಾಗೂ ಸಂತೋಷ್ ಕುತ್ತಮೊಟ್ಟೆ ಸೊಸೈಟಿ ಅಧ್ಯಕ್ಷತೆಗೆ ರಾಜೀನಾಮೆ ನೀಡಬೇಕೆಂಬ ವಾದವನ್ನು ಮಂಡಲ ಸಮಿತಿ ಮುಂದಿಟ್ಟರೆ, ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಬೇಕು, ಪಕ್ಷದ ಆಂತರಿಕ ಚಟುವಟಿಕೆಗಳಲ್ಲಿ ಪ್ರಮುಖ ಆರ್‌ಎಸ್‌ಎಸ್ ಮುಖಂಡರು ಹಸ್ತಕ್ಷೇಪ ನಡೆಸಬಾರದು ಎಂಬಿತ್ಯಾದಿ ಬೇಡಿಕೆಯನ್ನು ಅಸಮಾಧಾನಿತರ ಗುಂಪಿನವರು ಮುಂದಿಟ್ಟಿದ್ದರೆನ್ನಲಾಗಿದೆ. ಎರಡೂ ತಂಡದವರು ತಮ್ಮ ಬಿಗು ನಿಲುವಿನಿಂದ ಹಿಂದೆ ಸರಿಯದ ಕಾರಣ ವಿವಾದ ಬಗೆಹರಿದಿರಲಿಲ್ಲ. ಆ ಬಳಿಕ ಅಸಮಾಧಾನ ಮತ್ತು ಅತೃಪ್ತಿಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಿನ್ನ ಗುಂಪಿನ ನಾಯಕರನ್ನು ಕರೆಸಿ ಅಹವಾಲನ್ನು ಆಲಿಸಿ ಎರಡೂ ಕಡೆಯವರನ್ನು ಕರೆಸಿ ಚರ್ಚಿಸಿ ಕೂಡಲೇ ಪರಿಹಾರ ಕಂಡು ಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಈ ಕುರಿತು ಯಾವುದೇ ಬೆಳವಣಿಗೆ ಆಗದ ಕಾರಣ ಮತ್ತು ಸೂಕ್ತ ಪರಿಹಾರ ದೊರೆಯದ ಹಿನ್ನೆಯಲ್ಲಿ ಸುಳ್ಯದಲ್ಲಿ ಮತ್ತೆ ಸಭೆ ನಡೆಸಿದ ಭಿನ್ನ ಗುಂಪಿನ ನಾಯಕರು ಮುಂದಿನ ನಿರ್ಧಾರ ಕೈಗೊಂಡಿದ್ದು, ಇಂದು ಪತ್ರಿಕಾಗೋಷ್ಠಿ ಸಂಘಟಿಸಿದ್ದರು. ಇದರಲ್ಲಿ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಟುವಟಿಕೆಗೆ ಅಸಹಕಾರ ತೋರುವುದು ಮತ್ತು ಕೆಲವೆಡೆ ಸ್ವತಂತ್ರವಾಗಿ ಸ್ಪರ್ಧೆ ನಡೆಸುವುದು ಎಂಬಿತ್ಯಾದಿ ನಿರ್ಧಾರಗಳನ್ನು ಪ್ರಕಟಿಸುವುದಾಗಿ ಸುದ್ದಿಗಳು ಹರಿದಾಡಿತ್ತು.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ನಾಯಕರಾದ ಎಸ್.ಎನ್.ಮನ್ಮಥ ಮತ್ತು ಎನ್..ಎ.ರಾಮಚಂದ್ರ ಅವರನ್ನು ಸಂಪರ್ಕಿಸಿ ತಾನು ಪ್ರವಾಸದ ತುರ್ತುನಲ್ಲಿದ್ದ ಕಾರಣ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ. ಡಿ. ೭ರಂದು ಸುಳ್ಯಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ. ಈ ವಿಚಾರವನ್ನು ಸುಳ್ಯದ ನಾಯಕರು ಮಾಧ್ಯಮದವರಿಗೆ ತಿಳಿಸಬೇಕೆಂದು ಈ ಮುಖಂಡರು ಹೇಳಿದರೆನ್ನಲಾಗಿದೆ. ಇಂದು ಬೆಳಿಗ್ಗೆ ಸುದ್ದಿಯನ್ನು ಸಂಪರ್ಕಿಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಈ ಮಾಹಿತಿ ನೀಡಿದ್ದಾರೆ.
ಇಂದು ಯುವಜನ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ಬದಲಿಗೆ ಅಸಮಾಧಾನಿತ ಗುಂಪಿನ ಸಭೆ ನಡೆದು ಚರ್ಚಿಸಲಾಯಿತು. ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ಶೈಲೇಶ್ ಅಂಬೆಕಲ್ಲು, ವಿಷ್ಣು ಭಟ್ ಮೂಲೆತೋಟ, ಸದಾಶಿವ ಮೂಕಮಲೆ, ಎಸ್.ಎನ್.ಸುವರ್ಣಿನಿ, ವಿಜಯಕುಮಾರ್ ರೈ ಮನವಳಿಕೆ, ಸಂತೋಷ್ ಕುತ್ತಮೊಟ್ಟೆ, ಕೃಪಾಶಂಕರ್ ತುದಿಯಡ್ಕ, ಮಾಧವ ಭಟ್ ಶೃಂಗೇರಿ, ಶೇಖರ್ ಮಡ್ತಿಲ, ಶಾಂತರಾಮ ಕಣಿಲೆಗುಂಡಿ, ಪದ್ಮನಾಭ ಬೀಡು, ಮಲ್ಲೇಶ್ ಎನ್.ಕಡಬ, ಅರುಣ್ ನಾಯರ್‌ಕಲ್ಲು, ಕುಶಾಲಪ್ಪ ಪೆರುವಾಜೆ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಪತ್ರಕರ್ತರಿಗೆ ತಮ್ಮ ನಿರ್ಧಾರಗಳನ್ನು ತಿಳಿಸಿದ ನಾಯಕರು, ತಾವು ಈ ನಿರ್ಧಾರಕ್ಕೆ ಬಂದ ಹಿನ್ನಲೆಯಲ್ಲಿ ಸೂಚ್ಯವಾಗಿ ತಿಳಿಸಿ ರಾಜ್ಯಾಧ್ಯಕ್ಷರ ಭರವಸೆಯಂತೆ ಪ್ರಕರಣ ಸುಖಾಂತ್ಯ ಕಾಣುವ ನಿರೀಕ್ಷೆ ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.