ಆಧುನಿಕ ವ್ಯವಸ್ಥೆಯಿಂದಾಗಿ ಸಂಪ್ರದಾಯಿಕವಾಗಿ ಮಾಡುವ ಕೆಲಸ ಕಾರ್ಯಗಳು ಕಾಣಸಿಗುವುದು ಅಪರೂಪವಾಗಿದೆ.
ಭತ್ತಯನ್ನು ಒಣಕೆಯಲ್ಲಿ ಕುಟ್ಟಿ ಅಕ್ಕಿಮಾಡುವ ಕೆಲಸ ಇತಿಹಾಸ ಸೇರಿರುವ ಈ ದಿನಗಳಲ್ಲಿ ಇಂತಹ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಕೆಲಸಗಳು ಇಂದಿನ ಯುವಜನತೆಗೆ,ಆಧುನಿಕ ಯುಗಕ್ಕೆ ತ್ರಾಸದಾಯಕವಾದರೂ ಅಂದಿನ ದಿನಗಳಲ್ಲಿ ಅಗತ್ಯವೂ,ಸಂಸ್ಕೃತಿಯ ಪ್ರತಿಬಿಂಬವೂ ಆಗಿತ್ತು.