ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 2020-25 ನೇ ಅವಧಿಗೆ ಚುನಾವಣೆ ಘೋಷಣೆ ಆಗಿದ್ದು ಡಿ.4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.
ಸಹಕಾರಿ ಸಂಘದಲ್ಲಿನ ಒಟ್ಟು 12 ನಿದೇ೯ಶಕರ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿತ್ತು ಆದರೆ ಯಾವುದೇ ಹೆಚ್ಚುವರಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಎಲ್ಲಾ ೧೨ ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಲಿದೆ.
ಗುತ್ತಿಗಾರು ಕ್ಷೇತ್ರದಿಂದ ಬಿಟ್ಟಿ. ಬಿ ನೆಡುನಿಲಂ , ಜಾಜ್೯ ಕೆ. ಎಂ ಹಾಗೂ ಲಿಜೋ ಜೋಸ್ ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯ ಕ್ಷೇತ್ರದಿಂದ ಜಾನ್ ವಿಲಿಯಂ ಲಸ್ರಾದೊ , ಡೇವಿಡ್ ಧೀರಾ ಕ್ರಾಸ್ತಾ, ಸುನಿತಾ ಡಿ.ಸೋಜ ರವರು ನಾಮಪತ್ರ ಸಲ್ಲಿಸಿದ್ದಾರೆ. ಪರಿವಾರಕಾನ ಕ್ಷೇತ್ರದಿಂದ ತೋಮಸ್ ಎಂ.ಟಿ, ಮಿನಿ ನೆಲ್ಸನ್ ನಾಮಪತ್ರ ಸಲ್ಲಿಸಿದ್ದಾರೆ. ಸಂಪಾಜೆ ಕ್ಷೇತ್ರದಿಂದ ರಾಜು ಕ್ಷೇವಿಯರ್ , ಕಲ್ಲುಗುಂಡಿಯಿಂದ ಮೈಕಲ್ ಫ್ರಾನ್ಸಿಸ್ ಪಾಯ್ಸ್ , ಬೆಳ್ಳಾರೆಯಿಂದ ಒವಿನ್. ಜಿ.ಎಲ್. ಪಿಂಟೊ, ಪಂಜ ಕ್ಷೇತ್ರದಿಂದ ಲೂಯಿಸ್ ಲೋಬೊ ರವರು ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚು ಉಮೇದ್ವಾರಿಗಳು ಇಲ್ಲದ ಕಾರಣ ವಿರೋಧ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.