ತೊಡಿಕಾನ – ಕುದುರೆಪಾಯ – ದೇವಾಲಯ ರಸ್ತೆಯ ಫಲಾನುಭವಿಗಳಿಂದ ಚುನಾವಣಾ ಬಹಿಷ್ಕಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ತೊಡಿಕಾನದಿಂದ ಮತ್ತು ದೇವಾಲಯ ಭಾಗದಿಂದ ಕುದುರೆಪಾಯಕ್ಕೆ ಬರುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರಿಸಲು ಅಯೋಗ್ಯವಾಗಿದೆ. ತೊಡಿಕಾನ ಕಡೆಯಿಂದ ಬರುವ ರಸ್ತೆ ಡಾಮಾರು ಕಾಣದೇ ಇದ್ದು, ಕೆಲವು ಕಡೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ಕಾಂಕ್ರೀಟೀರಣಗೊಂಡಿದೆ. ಈ ರಸ್ತೆ ಏರು ರಸ್ತೆಯಾಗುದ್ದು, ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲಿಯೇ ಹೋಗಿ ಭಾರೀ ಗಾತ್ರದ ಹೊಂಡಗುಂಡಿಗಳಾಗಿವೆ. ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ. ಈ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಈ ಭಾಗದ ಜನರು ಹಲವು ಬಾರಿ ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ರಸ್ತೆಯ ಫಲಾನುಭವಿಗಳ ಹೆಸರಿನಲ್ಲಿ ಫಲಕಗಳನ್ನು ಮೂರು ಕಡೆಗಳಲ್ಲಿ ಅಳವಡಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.