ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ 34 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘವು 2019-20 ನೇ ಸಾಲಿನಲ್ಲಿ ಹೊಂದಿದ ಪ್ರಗತಿಯನ್ನು ಗುರುತಿಸಿ “ತಾಲೂಕುವಾರು ಪ್ರಥಮ ಉತ್ತಮ ಸಂಘ ” ಎಂದು ಗುರುತಿಸಿ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಸಂಘದ ಕಾರ್ಯದರ್ಶಿ ಮಾಧವ ವೈ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಂಘಕ್ಕೆ ಶಾಶ್ವತ ಸ್ಮರಣಿಕೆಯನ್ನು ನೀಡುವುದರ ಮೂಲಕ ಸಮ್ಮಾನಿಸಲಾಯಿತು.