ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಪರಾರಿಯಾದ ಅಪರಿಚಿತರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಕ್ಕುಜಡ್ಕ ಬಳಿ ನಡೆದ ಘಟನೆ – ಬಾಲಕಿ ಆಸ್ಪತ್ರೆಗೆ ದಾಖಲು

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳಿಗೆ ಬೈಕ್ ನಲ್ಲಿ ಬಂದ ಅಪರಿಚಿತರು ಸ್ಪ್ರೇ ಸಿಂಪಡಿಸಿ, ಪರಾರಿಯಾದ, ಸ್ಮೃತಿ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಘಟನೆಯೊಂದು ವರದಿಯಾಗಿದೆ.


ರಾಗಿಯಡ್ಕದ ಬಾಲಕಿ ಕುಕ್ಕುಜಡ್ಕ ಶಾಲೆಗೆ ಮಧ್ಯಾಹ್ನ ಬರುತ್ತಿದ್ದಾಗ ಆನೆಕಾರ ಸಮೀಪ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ರಾಸಾಯನಿಕವೊಂದನ್ನು ಸ್ಪ್ರೇ ಮಾಡಿ ಬಾಲಕಿಯ ಪ್ರಜ್ಞೆ ತಪ್ಪಿಸಿದರೆಂದೂ, ಆ ರಸ್ತೆಯಲ್ಲಿ ಬೇರೆ ವಾಹನ ಬರುವ ಶಬ್ಧ ಕೇಳಿ ಆಕೆಯನ್ನು ಅಲ್ಲಿ ಬಿಟ್ಟು ಹೋದರೆಂದು ಹೇಳಲಾಗುತ್ತಿದೆ. ವೈಕುಂಠ ಸಮಾರಾಧನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ರಿಕ್ಷಾವೊಂದು ಬರುವಾಗ ಯುವತಿ ಪ್ರಜ್ಞೆ ತಪ್ಪಿ ಮಾರ್ಗದಲ್ಲಿ ಬಿದ್ದಿದ್ದಳು. ಆಕೆಯನ್ನು ರಿಕ್ಷಾದವರು ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಿದರು.
ಕಾರಲ್ಲಿ ಬಂದವರು ಈ ಕೃತ್ಯ ನಡೆಸಿರಬೇಕೆಂದು ಮೊದಲು ಶಂಕಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸ್ಮೃತಿ ಬಂದ ಬಳಿಕ ಯುವತಿ, ಬೈಕಲ್ಲಿ ಬಂದವರು ಸ್ಪ್ರೇ ಮಾಡಿದ್ದಾಗಿ ಹೇಳಿದ್ದಾಳೆ.
ಅಮರಮುಡ್ನೂರು ಗ್ರಾ.ಪಂ. ಸದಸ್ಯ ಜನಾರ್ಧನ ಪೈಲೂರು, ಹರ್ಷಿತ್, ಬಾಲಕಿಯ ಸಹೋದರ ಬಾಲಕಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿಯನ್ನು ಅಪಹರಿಸಲು ಸ್ಪ್ರೇ ಸಿಂಪಡನೆ ಮಾಡಿರಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಪೋಲೀಸರಿಗೆ ಮಾಹಿತಿ ನೀಡಲಾಗಿದೆ. ಪೋಲೀಸರು ತನಿಖೆ ನಡೆಸಿದ ಬಳಿಕವಷ್ಟೆ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.