ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿರುವ ಸುಳ್ಯದ ನಾಯಕರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರ್ಪಡೆಯಾಗುತ್ತಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರನ್ನು ಸುಳ್ಯದ ಬಿಜೆಪಿ ನಾಯಕರುಗಳು, ಕಾರ್ಯಕರ್ತರು ಬೆಂಗಳೂರಿನ ಅವರ ಕಛೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಶಾಸಕ ಅಂಗಾರರು ಇದೀಗ ಅಪರಾಹ್ನ 3.50ಕ್ಕೆ ಬೆಂಗಳೂರಿನ ರಾಜಭವನದಲ್ಲಿ ಜರುಗುವ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಸುಳ್ಯದಿಂದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ ವಳಲಂಬೆ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ, ಬಿಜೆಪಿ ನಾಯಕರಾದ ಬಿ.ಕೆ. ಬೆಳ್ಯಪ್ಪ, ವೆಂಕಟ್ ದಂಬೆಕೋಡಿ, ಚಂದ್ರಶೇಖರ ಪನ್ನೆ, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಅಚ್ಚುತ ಗುತ್ತಿಗಾರು, ಕೃಷ್ಣಶೆಟ್ಟಿ ಕಡಬ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ತ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ, ಜಿ.ಪಂ. ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ಕಡಬ ತಾ.ಪಂ. ಸದಸ್ಯೆ ಶ್ರೀಮತಿ ಶುಭದಾ ರೈ, ತೇಜಸ್ವಿನಿ ಕಟ್ಟಪುಣಿ,ರಮಾನಂದ ರೈ, ಪ್ರವೀಣ್ ನೆಟ್ಟಾರು, ಶ್ರೀಪತಿ ಭಟ್, ಗಣಪತಿ ಭಟ್, ಜಗದೀಶ್ ಅರಂಬೂರು,ತೀರ್ಥಕುಮಾರ್ ಕುಂಚಡ್ಕ, ಬಾಲಚಂದ್ರ ಅಡ್ಕಾರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬೆಂಗಳೂರಿಗೆ ತಲುಪಿದ್ದಾರೆ.