ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಕೊನೆಯ ದಿನ ನಡೆಯಬೇಕಾಗಿದ್ದ ಕೋಳಿ ಅಂಕ ಈ ಬಾರಿ ನಡೆದಿಲ್ಲ.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಾತ್ರೆಯ ಸಂದರ್ಭ ಯಾವುದೇ ಅಂಗಡಿ,ಸಂತೆ, ಮನರಂಜನಾ ಕಾರ್ಯಕ್ರಮಗಳು, ಜಾಯಿಂಟ್ ವೀಲ್ ,ಗೋಬಿ, ಚರುಂಬುರಿ ಅಂಗಡಿಗಳು,ಐಸ್ ಕ್ರೀಂ ಗಾಡಿಗಳಿಗೆ ಅವಕಾಶ ಕೊಟ್ಟಿರಲಿಲ್ಲ.
ಅದೇ ರೀತಿ ಪ್ರತೀ ವರ್ಷ ಸಂಪ್ರದಾಯದಂತೆ ಜಾತ್ರೆಯ ಕೊನೆಯ ದಿನ ಬೂಡು ಗದ್ದೆಯಲ್ಲಿ ಕೋಳಿ ಅಂಕ ನಡೆಯಬೇಕಿತ್ತು. ಕೊರೋನಾ ಕಾರಣಕ್ಜಾಗಿ ಕೋಳಿ ಅಂಕವನ್ನು ಕೂಡ ಮಾಡದಿರಲು ನಿರ್ಧರಿಸಲಾಯಿತು. ಈ ಬಾರಿ ದೇವಸ್ಥಾನದಿಂದ ಮಂತ್ರಾಕ್ಷತೆ ಕೊಂಡೊಯ್ದು ಗದ್ದೆಗೆ ಹಾಕಿ ಒಂದು ಜೊತೆ ಕೋಳಿಯನ್ನು ಗದ್ದೆಯಲ್ಲಿ ಬಿಟ್ಟು ಸಾಂಕೇತಿಕವಾಗಿ ಕೋಳಿ ಅಂಕದ ವಿಧಿ ನೆರವೇರಿಸಲಾಯಿತು ಎಂದು ಬಲ್ಲಾಳ ರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ತಿಳಿಸಿದ್ದಾರೆ.