ಸುಳ್ಯ ಹೇಳಿ ಕೇಳಿ ಕಳೆದ 70+ ವರ್ಷದಿಂದ ಮೀಸಲು ಕ್ಷೇತ್ರ. ಅದರಲ್ಲಿ ನಮ್ಮ ಶಾಸಕ ಅಂಗಾರರು ಕಳೆದ 29 ವರ್ಷದಿಂದ 6 ಬಾರಿಯ ಶಾಸಕ ಮಾತ್ರವಲ್ಲ, ವಿಧಾನಸಭೆಯಲ್ಲಿ ಮುಂದಿನ ಸಾಲಿನ ಸೀಟಿನಲ್ಲಿ ಅವಕಾಶ ಗಿಟ್ಟಿಸಿದ ತನ್ನ ಪಕ್ಷದ ಹಿರಿಯ ಏಕೈಕ ದಲಿತ ಶಾಸಕರು ಆಗಿದ್ದಾರೆ.
ಒಬ್ಬ ಜನಪ್ರತಿನಿಧಿ ಇಂದಿನ ರಾಜಕಾರಣದಲ್ಲಿ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಅತ್ಯಂತ ಸರಳ ಸಜ್ಜನ ಸ್ವಾಭಿಮಾನಿ ಶಾಸಕರಾಗಿ ರಾಜ್ಯದ ಜನತೆ ಗೌರವಿಸುವ ರೀತಿಯ ನಡವಳಿಕೆ ಹೊಂದಿದ್ದಾರೆ.
ಯಾವುದೇ ಕಪ್ಪು ಚುಕ್ಕೆಯನ್ನು ಮೈಗೆ ಅಂಟಿಸಿಕೊಂಡವರಲ್ಲ. ವಿರೋಧ ಪಕ್ಷದವರು ರಾಜಕೀಯ ಕಾರಣದ ಹೊರತಾಗಿಯೂ, ವೈಯಕ್ತಿಕವಾಗಿ ಗೌರವಿಸುವ, ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ, ಜನಸಾಮಾನ್ಯರ ಸಮಸ್ಯೆಗಳ ನಡುವೆಯೇ ಬೆಳೆದು ಬಂದ ಒಬ್ಬ ಶ್ರಮಿಕರೂ ಹೌದು.
ನೂತನ ಸಚಿವ ಸ್ಥಾನದ ಜವಾಬ್ದಾರಿ ವಹಿಸುವ ಮೂಲಕ ಸುಳ್ಯದ ಹೆಸರನ್ನು ಪಸರಿಸುವ ನಾಯಕರಾಗಿ ಹೊರಹೊಮ್ಮಲಿ ಎಂದು ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ
ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಅವರು ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಂಗಾರರನ್ನು ಅಭಿನಂದಿಸಿದ್ದಾರೆ.