ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸುಳ್ಯ ಶಾಸಕ ಎಸ್.ಅಂಗಾರ ರವರಿಗೆ ಮಹತ್ವದ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇಡೀ ರಾಜ್ಯಾದ್ಯಂತ ಓಡಾಡಿ ಕನ್ನಡ ಸಂಸ್ಕೃತಿ ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತೇಜಿಸುವ , ಸಾಹಿತ್ಯ ಸಮ್ಮೇಳನ ಗಳಿಗೆ ಪೂರಕ ವ್ಯವಸ್ಥೆ ರೂಪಿಸುವ ಜವಾಬ್ದಾರಿ ಇರುವ ಈ ಇಲಾಖೆಯ ಅಧೀನಕ್ಕೆ ತುಳು ಅಕಾಡೆಮಿ, ಅರೆಭಾಷೆ ಅಕಾಡೆಮಿ ಸೇರಿದಂತೆ ಎಲ್ಲಾ ರೀತಿಯ ಭಾಷಾ ಅಕಾಡೆಮಿಗಳೂ ಬರುತ್ತವೆ.
ಈ ಹಿಂದೆ ಈ ಖಾತೆಯನ್ನು ಸಿ.ಟಿ.ರವಿಯವರು ನಿಭಾಯಿಸುತ್ತಿದ್ದರು.