ನೆಲ್ಲೂರು ಕೆಮ್ರಾಜೆ ಸೊಸೈಟಿಯ ಚುಕ್ಕಾಣಿ ಹಿಡಿದ ಸಹಕಾರ ಬಳಗ
ಸಹಕಾರ ಬಳಗಕ್ಕೆ 10 ಸ್ಥಾನ, ಸಹಕಾರ ಭಾರತಿಗೆ 3 ಸ್ಥಾನ
ಬಿಜೆಪಿ ಪಕ್ಷದವರೊಳಗೇ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ನೇತೃತ್ವದ ಸಹಕಾರ ಬಳಗವು ಅಧಿಕಾರಯುತವಾದ ಜಯ ದಾಖಲಿಸಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಸ್ಪರ್ಧಿಸಿದ ಸಹಕಾರ ಭಾರತಿಯು ಪರಾಭವಗೊಂಡಿದೆ.
ಸಹಕಾರ ಬಳಗವು 10 ಸ್ಥಾನಗಳನ್ನು ಗೆದ್ದಿದ್ದರೆ, ಸಹಕಾರ ಭಾರತಿಯು 3 ಸ್ಥಾನಗಳನ್ನು ಗೆದ್ದುಕೊಂಡಿದೆ.
ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಹರ್ಷಿತ್ ಎ.ಟಿ. ೭೬ ಮತಗಳನ್ನು ಸಹಕಾರ ಬಳಗದಿಂದ ಸ್ಪರ್ಧಿಸಿದ ಚಂದ್ರ ದಾಸನಕಜೆ ೩೮ ಮತಗಳನ್ನು ಪಡೆದು ಸಹಕಾರ ಭಾರತಿಯ ಹರ್ಷಿತ್ ಎ.ಟಿ. ವಿಜಯಿಯಾಗಿದ್ದಾರೆ. ೬ ಮತಗಳು ಅಸಿಂಧುವಾಗಿದೆ.
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ತೀರ್ಥಕುಮಾರ್ ತುಂಬೆತ್ತಡ್ಕ ೪೩೦ ಮತಗಳನ್ನು ಸಹಕಾರ ಬಳಗದಿಂದ ಸ್ಪರ್ಧಿಸಿದ ಚೇತನ್ ಅತ್ತಿಮರಡ್ಕ ೪೧೬ ಮತಗಳನ್ನು ಪಡೆದು ಸಹಕಾರ ಭಾರತಿಯ ತೀರ್ಥಕುಮಾರ್ ತುಂಬೆತ್ತಡ್ಕ ವಿಜಯಿಯಾಗಿದ್ದಾರೆ. ೧೭ ಮತಗಳು ಅಸಿಂಧುವಾಗಿದೆ.
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಮನಮೋಹನ ಎ.ಕೆ. ೩೪೨ ಮತಗಳನ್ನು ಸಹಕಾರ ಬಳಗದಿಂದ ಸ್ಪರ್ಧಿಸಿದ ಉಮೇಶ್ ಪ್ರಭು ೫೦೬ ಮತಗಳನ್ನು ಪಡೆದು ಸಹಕಾರ ಬಳಗದ ಉಮೇಶ್ ಪ್ರಭು ವಿಜಯಿಯಾಗಿದ್ದಾರೆ. ೧೫ ಮತಗಳು ಅಸಿಂಧುವಾಗಿದೆ.
ಮಹಿಳೆ ಮೀಸಲು ೨ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಪವಿತ್ರ ಸುಳ್ಳಿ ೩೭೮ ಮತಗಳನ್ನು , ಲಾಂಛನ ಕುಚ್ಚಾಲ ೩೨೧ ಮತಗಳನ್ನು, ಸಹಕಾರ ಬಳಗದಿಂದ ಸ್ಪರ್ಧಿಸಿದ ಇಂದಿರಾ ಎರ್ಮೆಟ್ಟಿ ೪೫೩ ಮತಗಳನ್ನು, ಸಂಧ್ಯಾ ಪುಣ್ಕುಟ್ಟಿ ೪೮೦ ಮತಗಳನ್ನು ಪಡೆದು ಸಹಕಾರ ಬಳಗದ ಇಂದಿರಾ ಎರ್ಮೆಟ್ಟಿ ಮತ್ತು ಸಂಧ್ಯಾ ಪುಣ್ಕುಟ್ಟಿ ವಿಜಯಿಯಾಗಿದ್ದಾರೆ. ೧೮ ಮತಗಳು ಅಸಿಂಧುವಾಗಿದೆ.
ಅನುಸೂಚಿತ ಜಾತಿ ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಬಾಬು ಸುಳ್ಳಿ ೩೬೧ ಮತಗಳನ್ನು , ಸಹಕಾರ ಬಳಗದಿಂದ ಸ್ಪರ್ಧಿಸಿದ ಹರೀಶ ಸುಳ್ಳಿ ೪೫೨ ಮತಗಳನ್ನು ಪಡೆದು ಸಹಕಾರ ಬಳಗದ ಹರೀಶ ಸುಳ್ಳಿ ವಿಜಯಿಯಾಗಿದ್ದಾರೆ. ೪೯ ಮತಗಳು ಅಸಿಂಧುವಾಗಿದೆ.
ಸಾಮಾನ್ಯ ವಿಭಾಗದ ಆರು ಸ್ಥಾನಗಳು ಕೂಡಾ ಸಹಕಾರ ಬಳಗದ ಪಾಲಾಗಿದೆ.
ಸಹಕಾರ ಬಳಗದ ವಿಷ್ಣುಭಟ್ ಮೂಲೆತೋಟ(515), ಸತ್ಯೇಶ್ ಚಂದ್ರೋಡಿ(419), ಮಾಧವ ಸುಳ್ಳಿ(441) ಶುಭಕರ ನಾಯಕ್(477), ದೇವಿಪ್ರಸಾದ್ ಸುಳ್ಳಿ(481), ಜಯಪ್ರಸಾದ್ ಸುಳ್ಳಿ(481) ಗೆಲುವು ಸಾಧಿಸಿದ್ದಾರೆ.
ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಶಿವಕರ ಕಜೆ(330), ಗಣೇಶ್ ಭಟ್(335), ಭೋಜಪ್ಪ ಗೌಡ ಹರ್ಲಡ್ಕ(363), ಸತೀಶ್ ಗುಡ್ಡನಮನೆ(361), ನಾರ್ಣಪ್ಪ ಮಾಸ್ತರ್(330), ಮಹೇಶ್ ಗಟ್ಟಿಗಾರು(330) ಮತಗಳಿಸಿ ಸೋಲು ಕಂಡರು.