ಸುಳ್ಯದ ಎನ್. ಎಂ.ಸಿ. ಕಾಲೇಜಿನಲ್ಲಿ 5 ದಿನಗಳ ಎನ್.ಸಿ.ಸಿ.ಕ್ಯಾಂಪ್ ಜ.18ರಿಂದ ಪ್ರಾರಂಭಗೊಂಡಿದೆ. 2ನೇ ದಿನವಾದ ನಿನ್ನೆ (ಜ.19)ಕಮಾಂಡಿಂಗ್ ಆಫೀಸರ್ ಚೇತನ್ ದಿಮಾನ್ ಎನ್.ಸಿ.ಸಿ.ಯ ವಿಶೇಷತೆಯ ಬಗ್ಗೆ ಭಾಷಣ ಮಾಡಿ, ಮಕ್ಕಳನ್ನು ಹುರಿದುಂಬಿಸಿದರು.
ಕಾಲೇಜಿನ ಎ.ಎನ್.ಓ. ಲೆಫ್ಟಿನೆಂಟ್ ಸೀತಾರಾಮ ಎಂ.ಡಿ., ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.ವಿನೋದ್ ಶರ್ಮಾ, ಶಿಜು ಬಿ., ನವದೀಪ್ ಬೇಡಿ, ಮತ್ತು ಕಾಲೇಜಿನ ಪ್ರಾಂಶುಪಾಲ ಪೂವಪ್ಪ ಕಣಿಯೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.