ಎರಡು ಮೂರು ದಿನಗಳಿಂದ ಜ್ವರದಿಂದಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.
ಜಯನಗರ ನಿವಾಸಿ ಬಾಬು ಮತ್ತು ಗೀತಾ ರವರ 12 ವರ್ಷದ ಮಗಳು, ಜಯನಗರ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಜನನಿಗೆ ಎರಡು ಮೂರು ದಿನಗಳಿಂದ ಜ್ವರ ಬಾಧಿಸುತ್ತಿತ್ತು. ಆಸ್ಪತ್ರೆಯಿಂದ ಮದ್ದು ತಂದಿದ್ದರೂ ಗುಣವಾಗಿರಲಿಲ್ಲ. ಅದಕ್ಕಾಗಿ ಕೆ.ವಿ.ಜಿ. ಗೆ ಸೇರಿಸಲಾಗಿತ್ತು. ಆಕೆಗೆ ಜಾಂಡಿಸ್ ಆಗಿತ್ತೆನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಅಸು ನೀಗಿದಳೆಂದು ತಿಳಿದುಬಂದಿದೆ.