ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ಎಂಎ) ಬೆಳ್ಳಾರೆ ಝೋನಲ್ ವತಿಯಿಂದ ಜನವರಿ 24ರಂದು ಸಂಜೆ 7.30 ಕ್ಕೆ ನಿಂತಿಕಲ್ಲು ಕಜೆ ಬದ್ರಿಯ ಮಸ್ಜಿದ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯದ್ ಕೂರಿಕುಝಿ ತಂಙಳ್ ವಹಿಸಲಿದ್ದಾರೆ. ಹಾಗೂ ವಿವಿಧ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ಜನವರಿ20ರಂದು ಕಜೆ ಬದ್ರಿಯ ಮಸ್ಜಿದ್ ನಲ್ಲಿ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಝೋನಲ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಉಪಾಧ್ಯಕ್ಷ ಹಮೀದ್ ಅಲ್ಫ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಹ್ಷನಿ ಮಾಡನ್ನೂರು, ಬೈತಡ್ಕ ರಿಜಿನಲ್ ಅಧ್ಯಕ್ಷ ಅಬ್ದುಲ್ ರೆಹಮಾನ್ ನೆಲ್ಲಿಕಟ್ಟೆ, ಕೋಶಾಧಿಕಾರಿ ಹನೀಫ್ ಹಾಜಿ ಇಂದ್ರಾಜೆ,ಬದ್ರಿಯ ಮಸ್ಜಿದ್ ಖತೀಬರಾದ ಮೊಹಮ್ಮದ್ ಅಲಿ ಸಖಾಫಿ, ಮುಅಲ್ಲಿಂ ಮುಸ್ತಫ ಝಹರಿ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ನಿಂತಿಕಲ್ಲು, ಜೊತೆ ಕಾರ್ಯದರ್ಶಿ ಅಬ್ದುಲ್ ರಜಾಕ್,ಇಬ್ರಾಹಿಂ ಕಜೆ, ಎಸ್ ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹನೀಫಿ ಮೊದಲಾದವರು ಉಪಸ್ಥಿತರಿದ್ದರು.