ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಉದ್ಘಾಟನಾ ಸಮಾರಂಭವು ಜ.22 ರಂದು ಜರುಗಿತು. ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾಣ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕೋವಿಡ್ ಲಸಿಕೆಯ ತಾಲೂಕು ನೋಡಲ್ ಅಧಿಕಾರಿ ಡಾ.ತ್ರಿಮೂರ್ತಿ ,ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಿ.ಆರೋಗ್ಯ ಸಹಾಯಕಿ ರೇಖಾ ರವರು ನಿರೂಪಿಸಿದರು.
ಮೊದಲ ಹಂತದ ಲಸಿಕೆಯು ಆರೋಗ್ಯ ಕಾರ್ಯಕರ್ತರಿಗೆ ಬಂದಿದ್ದು. ಇದಕ್ಕಾಗಿ ಆನ್ ಲೈನ್ ಮೂಲಕ ಹೆಸರು ಕಳುಹಿಸಿ, ಯ್ಯಾಫ್ ಬಳಸಲಾಗುತ್ತದೆ.ಇಲಾಖೆಯಿಂದ ಆನ್ ಲೈನ್ ಮೂಲಕ ಲಸಿಕೆ ನೀಡಲು ಪಟ್ಟಿ ನೀಡಲಾಗಿದೆ. ಅದೇ ಪ್ರಕಾರ ಪ್ರಥಮವಾಗಿ ವೈದ್ಯಾಧಿಕಾರಿ ಡಾ. ಮಂಜುನಾಥ್ ರವರಿಗೆ ಲಸಿಕೆ ನೀಡಲಾಯಿತು.