ಕರ್ನಾಟಕ ಘನ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಸ್. ಅಂಗಾರರವರಿಗೆ ಹುಟ್ಟೂರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಜ.22 ರಂದು ತಾಲೂಕು ಪಂಚಾಯತ್ ನ ಪಯಸ್ವಿನಿ ಸಭಾಂಗಣದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಎ.ವಿ.ತೀರ್ಥರಾಮ, ಪ್ರಧಾನ ಕಾರ್ಯದರ್ಶಿಗಳಾದ ನ.ಪಂ.ಅಧ್ಯಕ್ಷ ವಿನಯ ಕಂದಡ್ಕ ಮತ್ತು ನಾರಾಯಣ ಕೇಕಡ್ಕ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜ. 25 ರಂದು ನಡೆಯಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ , ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು 5.45 ರ ತನಕ ನಡೆಯಲಿರುವುದು. ಬಳಿಕ ಪ್ರಥಮ ಆದ್ಯತೆಯಲ್ಲಿ ಸಂಘ ಸಂಸ್ಥೆಗಳವರಿಗೆ ಹಾರಾರ್ಪಣೆ ಮಾಡಿ ಅಭಿನಂದಿಸಲು ಅವಕಾಶ ನೀಡಲಾಗುವುದು. ನಂತರ ವೈಯುಕ್ತಿಕವಾಗಿ ಹಾರಾರ್ಪಣೆ ಮಾಡಲು ಅವಕಾಶ ನೀಡಲಾಗುವುದು.
ಸಚವರನ್ನು ವೇದಿಕೆಗೆ ಪೂರ್ಣ ಕುಂಭ ಮತ್ತು ವಾದ್ಯ ಘೋಷಗಳೊಂದಿಗೆ ಸ್ವಾಗತಿಸುವುದು.ಸಭಾ ಕಾರ್ಯಕ್ರಮವು ಕೆ.ಆರ್. ಗೋಪಾಲಕೃಷ್ಣ ರವರ ವೈಯುಕ್ತಿಕ ಗೀತೆಯೊಂದಿಗೆ ಪ್ರಾರಂಭಗೊಳ್ಳಲಿರುವುದು. ದಂಪತಿ ಸಮೇತ ಸಚಿವರಿಗೆ ಅಭಿನಂದನೆಯನ್ನು ಸಮರ್ಪಿಸಲಾಗುವುದು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ರವರು ಅಭಿನಂದನಾ ಭಾಷಣ ಮಾಡಲಿರುವರು. ಬಳಿಕ
ಮುಖ್ಯ ಅಭ್ಯಾಗತರಾದ ಡಿ.ವಿ, ಕಟೀಲು, ಕೋಟ ಹಾಗೂ ಡಾ. ಕೆ.ವಿ.ಚಿದಾನಂದರವರು ಶುಭಾಶಂಸನೆಗೈಯಲಿದ್ದಾರೆ.ತದನಂತರ ಸಚಿವ ಎಸ್. ಅಂಗಾರ ರವರಿಂದ ಮಾತು.ಸಮಸ್ತರ ಪರವಾಗಿ ಜಯಪ್ರಕಾಶ್ ರೈ ಹಾಗೂ ಎಂ.ಬಿ.ಸದಾಶಿವ ರವರು ಸಚಿವರಿಗೆ ಶುಭಹಾರೈಕೆ ಮಾಡಲಿರುವರು. ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಪ್ರ.ಕಾರ್ಯದರ್ಶಿ ವಿನಯ ಕಂದಡ್ಕ ರವರು ಸಭೆಗೆ ತಿಳಿಸಿದರು.
ಮಾಲಾರ್ಪಣೆ ಮಾಡಿ ಅಭಿನಂದನೆ ಮಾಡಬಯಸುವವರು ಸಂಘ ಸಂಸ್ಥೆಗಳ ಪ್ರಮುಖರು ಮುಂಚಿತವಾಗಿ ಹೆಸರು ನೀಡಬೇಕು.ಹೆಸರು ನೋಂದಾಯಿಸಿದವರಿಗೆ ಪ್ರಥಮ ಆದ್ಯತೆಯಲ್ಲಿ ಅವಕಾಶ, ಸ್ಥಳದಲ್ಲಿಯೇ ಹಾರಾರ್ಪಣೆ ಮಾಡಬಯಸುವರಿಗೆ ಕೊನೆಯಲ್ಲಿ ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸುಳ್ಯದ ಎಲ್ಲಾ ವರ್ತಕರು ಭಾಗಿಗಳಾಗಿ ಯಶಸ್ಸಿಗೆ ಕೈಜೋಡಿಸುವಂತೆ ಎ.ವಿ. ತೀರ್ಥರಾಮರವರು ಕರೆ ನೀಡಿದರು.
ಸಭೆಯಲ್ಲಿ ಡಾ.ಹರಪ್ರಸಾದ್ ತುದಿಯಡ್ಕ, ಸುಭೋದ್ ಶೆಟ್ಟಿ ಮೇನಾಲ, ಎನ್. ಎ.ಜ್ಞಾನೇಶ್, ಸುಧಾಕರ ರೈ ಪೆರಾಜೆ, ಎನ್. ಎ.ರಾಮಚಂದ್ರ, ಎಂ.ಬಿ. ಸದಾಶಿವ, ಜಯಪ್ರಕಾಶ್ ರೈ, ಡಾ.ಚಂದ್ರಶೇಖರ ದಾಮ್ಲೆ, ಸುಧಾಕರ ಕಾಮತ್ ಅಡ್ಕಾರ್, ಕೆ.ಎಂ.ಮುಸ್ತಾಫ, ರಾಮಚಂದ್ರ ಪೆಲತ್ತಡ್ಕ, ಹರೀಶ್ ರೈ ಉಬರಡ್ಕ, ವಿನಯ್ ಮುಳುಗಾಡು, ದೊಡ್ಡಣ್ಣ ಬರೆಮೇಲು, ಮಹೇಶ್ ಕುಮಾರ್ ರೈ ಮೇನಾಲ, ಲಕ್ಷ್ಮೀ ನಾರಾಯಣ ಕಜೆಗದ್ದೆ, ಅನಿಲ್ ಪೂಜಾರಿಮನೆ, ಹರೀಶ್ ಬೂಡುಪನ್ನೆ, ಗುಣವತಿ ಕೊಲ್ಲಂತಡ್ಕ, ಇಂದಿರಾ ರೈ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಎ.ವಿ ತೀರ್ಥರಾಮ ಸ್ವಾಗತಿಸಿ, ನಾರಾಯಣ ಕೇಕಡ್ಕ ವಂದಿಸಿದರು.