ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

ಫೆ. 19 : ಸುಳ್ಯದಲ್ಲಿ 25 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಡಾ.ಪೂವಪ್ಪ ಕಣಿಯೂರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ

ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 25 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.19 ರಂದು ಸುಳ್ಯ ಎನ್.ಎಂ.ಸಿ ಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಜ.22 ರಂದು ಅಂಬಟೆಡ್ಕದಲ್ಲಿರುವ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಸಭೆ ನಡೆಯಿತು.
ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಿತು.
ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲ, ಸಾಹಿತಿ ಡಾ.ಪೂವಪ್ಪ ಕಣಿಯೂರು ರವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಯಿತು.
ಬಳಿಕ ಸಭೆಯಲ್ಲಿದ್ದವರು ಎಲ್ಲರು ಒಮ್ಮತ ಸೂಚಿಸಿ ಡಾ.ಪೂವಪ್ಪ ಕಣಿಯೂರು ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದರು.
ಬಳಿಕ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕರವರು ಸಮ್ಮೇಳನಾಧ್ಯರಾಗಿ ಡಾ.ಪೂವಪ್ಪ ಕಣಿಯೂರುರವರ ಹೆಸರನ್ನು ಘೋಷಿಸಿದರು.
ನಂತರ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಸಮ್ಮೇಳನ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚನೆ ಮಾಡುವ ಬಗ್ಗೆ ಪ್ರ.ಕಾ.ಚಂದ್ರಶೇಖರ ಪೇರಾಲು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಸ್ವಾಗತಿಸಿ,ಕಾರ್ಯದರ್ಶಿ ತೇಜಸ್ವಿ ಕಡಪಾಲ ವಂದಿಸಿದರು.
ಸಭೆಯಲ್ಲಿ ಸಾಹಿತ್ಯ ಪರಿಷತ್ ಕೋಶಾಧಿಕಾರಿ ದಯಾನಂದ ಆಳ್ವ, ಕಸಾಪ ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಸಮ್ಮೇಳನದ ಪೂರ್ವಾಧ್ಯಕ್ಷರಾದ ಪ್ರಭಾಕರ ಶಿಶಿಲ, ಕೃಷ್ಣ ಶಾಸ್ತ್ರೀ ಮರ್ಕಂಜ, ನಾಗಪ್ಪ ಕುತ್ಯಾಳ,ಜಯಮ್ಮ ಚೆಟ್ಟಿಮಾಡ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ,ಮಹಾಲಕ್ಷ್ಮೀ ಕೊರಂಬಡ್ಕ,ಎಂ.ವಿ.ಗಿರಿಜ, ವಸಂತ ಏನೆಕಲ್ಲು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.