ಸಂಪಾಜೆ ಲಯನ್ಸ್ ಕ್ಲಬ್‌ಗೆ ವಲಯಾಧ್ಯಕ್ಷರ ಭೇಟಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಲಯನ್ಸ್ 317 ಡಿಯ ವಲಯ 2ರ ವಲಯಾಧ್ಯಕ್ಷರಾದ ಲಯನ್ ಸಂಧ್ಯಾ ಸಚಿತ್‌ಕುಮಾರ್ ರೈರವರ ಅಧಿಕೃತ ಭೇಟಿ ಕಾರ್ಯಕ್ರಮವು ಸಂಪಾಜೆ ಜ್ಯೂನಿಯರ್ ಕಾಲೇಜಿನಲ್ಲಿ ಜ. 23  ರಂದು ನಡೆಯಿತು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಚೆಂಬು ಶಾಲೆ ಮತ್ತು ಸಂಪಾಜೆ ಜ್ಯೂನಿಯರ್‌ ಕಾಲೇಜಿಗೆ ಹೋಗುವ ಸೂಚನ ಫಲಕವನ್ನು ಉದ್ಘಾಟಿಸಿದರು.


ಸಭಾ ಕಾರ್ಯಕ್ರಮದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ವಾಸುದೇವ ಕಟ್ಟೆಮನೆ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಲ.ಕಿಶೋರ್‌ಕುಮಾರ್ ಪಿ.ಬಿ., ಕಾರ್ಯದರ್ಶಿ ಲ. ಶುಭರವೀಂದ್ರ, ಕೋಶಾಧಿಕಾರಿ ಲ. ವೆಂಕಪ್ಪ ಬೊಳ್ಳೂರು, ಗುತ್ತಿಗಾರು ಕ್ಲಬಿನ ಅಧ್ಯಕ್ಷ ಲ.ವಿನೋದ್‌ಕುಮಾರ್, ಸುಳ್ಯ ಕ್ಲಬಿನ ಅಧ್ಯಕ್ಷರಾದ ಲ. ರಾಮಚಂದ್ರ ಪೆಲ್ತಡ್ಕ ಇದ್ದರು.

ಭಾರತೀಯ ಅಂಚೆ ಇಲಾಖೆಯ ಸಂಪಾಜೆ ಅಂಚೆ ಕಚೇರಿಯಲ್ಲಿ ದೀರ್ಘ ಕಾಲದಿಂದ ಅಂಚೆ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾಬ್ಜನ್ ಎಸ್.ಎಸ್. ರವರನ್ನು ಅಭಿನಂದಿಸಲಾಯಿತು. ಸಂಪಾಜೆ ಗ್ರಾಮದ ೧೮ ವಯಸ್ಸಿನ ಅಂಗವಿಕಲ ಯುವಕ ಸುರೇಶ್‌ಗೆ ವ್ಹೀಲ್ ಚಯರ್ ಹಸ್ತಾಂತರ ಮಾಡಲಾಯಿತು.
ಅಧ್ಯಕ್ಷ ವಾಸುದೇವರವರು ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಕು| ಅಕ್ಷರ ಅಪ್ಪಣ್ಣ ಪ್ರಾರ್ಥಿಸಿದರು. ವೆಂಕಪ್ಪ ಬೊಳ್ಳೂರು ವಂದಿಸಿದರು. ಶ್ರೀಮತಿ ಧರ್ಮಕಿಶೋರ್‌ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.