ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಜ.24 ರಂದು ಪಂಚಾಯತ್ ನ ಗ್ರಾಮ ವಿಕಾಸ ಭವನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯೆ
ಶ್ರೀಮತಿ ಸುಜಾತಾ ಪವಿತ್ರ ಮಜಲು ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಐವರ್ನಾಡು ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆಂಗ್ಲಭಾಷಾ ಶಿಕ್ಷಕರಾದ ಪ್ರೇಮಾ ಉದಯ್ ಕುಮಾರ್ ರವರು ಹಾಗೂ ಹಿರಿಯ ಶಿಕ್ಷಕರಾದ
ಶ್ರೀಯುತ ಸೂಫಿ ಪೆರಾಜೆ ಅವರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಯು.ಡಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಎಲ್ಲಾ ವಾರ್ಡ್ ಗಳ
ಸದಸ್ಯರು ಭಾಗವಹಿಸಿದ್ದರು. ಐವರ್ನಾಡು
ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಹಲವಾರು ಹೆಣ್ಣುಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರಬಂಧ ರಚನೆ , ಚಿತ್ರರಚನೆ, ಕವನ ರಚನೆ ಮತ್ತು ವಾಚನ ಸ್ಪರ್ಧೆಗಳು ಪ್ರಾಥಮಿಕ ವಿಭಾಗ ಮತ್ತು ಪ್ರೌಢ/ಕಾಲೇಜು ವಿಭಾಗಗಳಲ್ಲಿ ನಡೆದವು.
ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಭಾಗವಹಿಸಿದವರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಪಂಚಾಯಿತಿ ಸದಸ್ಯರು ಹಾಗೂ ವಾರ್ಡ್ ಸದಸ್ಯರು
ವಿಜೇತರಿಗೆ ಬಹುಮಾನವನ್ನು ನೀಡಿದರು. ನಿಡುಬೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ರಾಜ್
ಕಾರ್ಯಕ್ರಮ ನಿರೂಪಿಸಿದರು.
ನಿಕಟಪೂರ್ವ ಸದಸ್ಯರಾದ ಶ್ರೀಮತಿ ರಾಜೀವಿ ಉದ್ದಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.