ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಆಶ್ರಯದಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಜ. 27ರಂದು ಸಂಜೆ ಅಯ್ಯನಕಟ್ಟೆ ಜಾತ್ರಾಂತರಂಗ ನೆನಪಿನ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಎನ್. ರಘುನಾಥ ರೈ ಎಣ್ಮೂರು ಮತ್ತು ಪ್ರಾಧ್ಯಾಪಕ ಹಾಗೂ ಜಾನಪದ ಸಂಶೋಧಕ ಡಾ. ನವೀನ್ ಕುಮಾರ್ ಮರಿಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಉಳ್ಳಾಕುಲು ಸೇವಾ ಸಮಿತಿಯ ಗೌರವಾಧ್ಯಕ್ಷ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಪ್ರಧಾನ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್, ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾಧವ ಗೌಡ ಅಯ್ಯನಕಟ್ಟೆ ಸಂಚಿಕೆಯ ಪ್ರಧಾನ ಸಂಪಾದಕರಾದ ಸೀತಾರಾಮ ಕಂಚಿಕಾರಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾನಪದ ಸಂಶೋಧಕ ಡಾ. ನವೀನ್ ಕುಮಾರ್ ಮರಿಕೆ ಧಾರ್ಮಿಕ ಉಪನ್ಯಾಸ ನೀಡಿದರು. ಕು. ಸಿಂಚನಾ ಕಂಚಿಕಾರಮೂಲೆ ಪ್ರಾರ್ಥಿಸಿದರು. ಜಾತ್ರೋತ್ಸವ ಸಮಿತಿ ಸಂಚಾಲಕರಾದ ವಾಸುದೇವ ಆಚಾರ್ ಟಿ ಸ್ವಾಗತಿಸಿದರು. ನೆನಪಿನ ಸಂಚಿಕೆ ಸಮಿತಿ ಸಂಪಾದಕರಾದ ಉಪನ್ಯಾಸಕ ರಾಮಪ್ರಸಾದ್ ಕಾಂಚೋಡು ಮತ್ತು ಶ್ರೀಮತಿ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.