ಗಾಂಗೇಯ ಸುಬ್ರಹ್ಮಣ್ಯ ಪ್ರಥಮ; ಕುಕ್ಕೇಶ್ರೀ ಸುಬ್ರಹ್ಮಣ್ಯ ದ್ವಿತೀಯ
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇವರ ಆಶ್ರಯದಲ್ಲಿ ನಡೆದ ವೀರಮಾರುತಿ ಟ್ರೋಫಿ -2021 ಕ್ರಿಕೆಟ್ ಪಂದ್ಯಾಟ ಜ.26 ರ ಸಂಜೆ ಮುಕ್ತಾಯಗೊಂಡಿದ್ದು ಸಂಜೆ ಬಹುಮಾನ ವಿತರಣೆ ನಡೆಯಿತು. ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ವಿಜೇಶ್ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ಒಕ್ಕಲಿಗ ಗೌಡ ಯುವ ಘಟಕ ಮಂಗಳೂರು ಇದರ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಬಹುಮಾನ ವಿತರಕರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿನ್ಯಾಸ್ ಕೊಚ್ಚಿ, ಸುಬ್ರಹ್ಮಣ್ಯ ಮೆಸ್ಕಾಂ ನ ಸಹಾಯಕ ಅಭಿಯಂತರ ಚಿದಾನಂದ ಕನ್ನಡ್ಕ, ನಿವೃತ್ತ ಸರಕಾರಿ ನೌಕರ ದಾಮೋದರ ಕನ್ನಡ್ಕ, ಗುತ್ತಿಗಾರು ಮೆಸ್ಕಾಂ ಕಿರಿಯ ಅಭಿಯಂತರ ಲೊಕೇಶ್ ಎಣ್ಣೆಮಜಲು, ರಾಜ್ಯ ಬ್ಯಾಡ್ಮಿಂಟನ್ ಆಟಗಾರ ಕಾರ್ತಿಕ್ ಸುಬ್ರಹ್ಮಣ್ಯ, ಮಾಜಿ ಗ್ರಾ.ಪಂ ಸದಸ್ಯ ಶಿವಪ್ರಕಾಶ್ ಅಡ್ಡನಪಾರೆ, ಶಬ್ಬೀರ್ ಗುತ್ತಿಗಾರು, ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು, ಉಪಸ್ಥಿತರಿದ್ದರು.
ನಿಕಟ ಪೂರ್ವಾಧ್ಯಕ್ಷ ಸತೀಶ್ ಮೂಕಮಲೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಾಧವ ಸ್ವಾಗತಿಸಿ ವಂದಿಸಿದರು. ಸುಕುಮಾರ ಕಂದ್ರಪ್ಪಾಡಿ ಎರಡು ದಿನಗಳ ಕಾಲ ವೀಕ್ಷಕ ವಿವರಣೆ ನೀಡಿದರು. ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ : ಗಾಂಗೇಯ ಸುಬ್ರಹ್ಮಣ್ಯ ಪ್ರಥಮ ಸ್ಥಾನ ಪಡೆದರೆ, ಕುಕ್ಕೆಶ್ರೀ ಸುಬ್ರಹ್ಮಣ್ಯ ದ್ವಿತೀಯ ಸ್ಥಾನ ಪಡೆಯಿತು. ಸ್ಕಾಪಿನ್ ಕಿಂಗ್ ಕೊಲ್ಲಮೊಗ್ರ ಮತ್ತು ಕನ್ನಡ್ಕ ಪ್ರೆಂಡ್ಸ್ ಸುಳ್ಯ ಪದವು ಸೆಮಿಫೈನಲ್ ಸೋತ ತಂಡಗಳು. ನವದುರ್ಗಾ ಬಾಕಿಲ ತಂಡ ಶಿಸ್ತುಬದ್ಧ ತಂಡ ಪ್ರಶಸ್ತಿ ತನ್ನದಾಗಿಸಿತು.