ಅಧ್ಯಕ್ಷರಾಗಿ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷರಾಗಿ ಧನಂಜಯ ಕುಮಾರ್ ಎರ್ಮೆಟ್ಟಿ
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಚುನಾವಣೆ ನಡೆದು 8 ಸದಸ್ಯರು ಆಯ್ಕೆಗೊಂಡಿದ್ದು, ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಇಂದು ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷ ಸ್ಥಾನಕ್ಕೆ ಧನಂಜಯ ಕುಮಾರ್ ಎರ್ಮೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇದ್ದುದರಿಂದ ಶೀಲಾವತಿ ಹಾಗೂ ಧನಂಜಯರು ಅವಿರೋಧವಾಗಿ ಆಯ್ಕೆಯಾದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ರಶ್ಮಿಯವರು ಚುನಾವಣಾಧಿಕಾರಿಯಾಗಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೀಲಾವತಿ ಸಹಕರಿಸಿದರು. ಈ ಸಂದರ್ಭದಲ್ಲಿ ಸದಸ್ಯರುಗಳಾದ ವೇಣುಗೋಪಾಲ ತುಂಬೆತ್ತಡ್ಕ, ರಾಮಚಂದ್ರ ಪ್ರಭು, ವೇಣುಗೋಪಾಲ ಪುಣ್ಕುಟ್ಟಿ, ವನಿತಾ ಬೊಳ್ಳಾಜೆ, ವಂದನಾ ಹೊಸ್ತೋಟ, ಭಾಗೀರಥಿ ಎರ್ಮೆಟ್ಟಿ ಹಾಗೂ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷ ಈಶ್ವರಪ್ಪ ಹರ್ಲಡ್ಕ, ಬಾಲಕೃಷ್ಣ ಕಂಜಿಪಿಲಿ ಮತ್ತಿತರರು ಉಪಸ್ಥಿತರಿದ್ದರು.