ಶ್ರೀ ರಾಮಚಂದ್ರ ಮಿಷನ್ ಮತ್ತು ವಿಶ್ವಸಂಸ್ಥೆ ಮಾಹಿತಿ ಕೇಂದ್ರ (ಭಾರತ ಮತ್ತು ಭೂತಾನ್) ಇದರ ಸಹಯೋಗದಲ್ಲಿ ನಡೆದ 16ನೇ ವರ್ಷದ ಅಖಿಲ ಭಾರತ ಹಾರ್ಟ್ಫುಲ್ನೆಸ್ ಪ್ರಬಂಧ ಸ್ಪರ್ಧೆಯಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶ್ರೀಜಾ ರೈಯವರು ನೇರವಾಗಿ ಸ್ಪರ್ಧಿಸಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಹಣದ ಕೊರತೆಯೊಂದೇ ದಾರಿದ್ರ್ಯವಲ್ಲ ಎಂಬ ಶೀರ್ಷಿಕೆಯಡಿ ದೇಶದಾದ್ಯಂತ ಹಲವಾರು ವಿದ್ಯಾರ್ಥಿಗಳು ಇಂಗ್ಲೀಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಬಂಧ ರಚಿಸಿದ್ದರು.
ಇವರೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀವರ, ನಿಶಾ, ಸುಹಾಸ್ ಮತ್ತು ಅಶ್ವಿನಿಯವರು ರಚಿಸಿದ ಪ್ರಬಂಧಗಳು ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಉಜ್ವಲ್ ಯು.ಜೆ.ಯವರು ಶ್ರೀಜಾ ರೈ ಮತ್ತಿತರ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.