ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ಉದ್ಘಾಟನೆ
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಸುಳ್ಯ ಇವರ ಸಹಯೋಗದಲ್ಲಿ ಯಕ್ಷಗಾನ ಪಠ್ಯ ಪುಸ್ತಕಾಧಾರಿತ ‘ಹೆಜ್ಜೆ ‘ ವೀಡಿಯೋ ಬಿಡುಗಡೆ ಮತ್ತು ಇಂಗ್ಲಿಷ್ ಯಕ್ಷಗಾನ ಬಯಲಾಟ DISGRACED SUDARSHANA ಹಾಗೂ ಪ್ರಜ್ಞಾ ಯಕ್ಷಗಾನ ಕಲಾಶಾಲೆಯ ಉದ್ಘಾಟನಾ ಕಾರ್ಯಕ್ರಮವು ಫೆ.21 ರಂದು ಸುಳ್ಯ ಜ್ಯೋತಿ ವೃತ್ತದ ಬಳಿಯ ಪಾರ್ತಿಸುಬ್ಬ ರಂಗಮಂದಿರದಲ್ಲಿ ನಡೆಯಲಿರುವುದು ಎಂದು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ನ ಪ್ರಕಾಶ್ ಮೂಡಿತ್ತಾಯ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಓಎ. 21 ರಂದು ಸಂಜೆ ಗಂಟೆ 4.30 ಕ್ಕೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಚಿವರಾದ ಎಸ್.ಅಂಗಾರರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲಾಶಾಲೆಯ ಉದ್ಘಾಟನೆಯನ್ನು ಖ್ಯಾತ ಯಕ್ಷಗಾನ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ ರವರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಪ್ರೊ. ಎಂ.ಎಲ್. ಸಾಮಗ, ಡಾ.ಪಾಂಡುರಂಗ ರವರು ಉಪಸ್ಥಿತರಿರುತ್ತಾರೆ. ಸಂಜೆ ಗಂಟೆ 5.30 ರಿಂದ 8.30 ರ ತನಕ ವೆಂಕಟರಾಮ ಭಟ್ ನಿರ್ದೇಶನದ ಮತ್ತು ಪ್ರಕಾಶ ಮೂಡಿತ್ತಾಯ ರವರ ಸಂಯೋಜನೆಯ ಇಂಗ್ಲಿಷ್ ಯಕ್ಷಗಾನ ಬಯಲಾಟ’ DISGRACED SUDARSHANA ‘ ಎಂಬ ಪ್ರಸಂಗ ಪ್ರದರ್ಶನವಾಗಲಿರುವುದು ಎಂದು ಹೇಳಿದರು.
ಕಾರ್ಯಕ್ರಮ ಸಂಘಟಕ ಪ್ರಕಾಶ್ ಮೂಡಿತ್ತಾಯ, ಪ್ರಸಂಗ ರಚನೆ ಮತ್ತು ನಿರ್ದೇಶನ ಮಾಡಿದ ವೆಂಕಟ್ರಾಮ ಭಟ್, ಸಂಘಟಕ ಉದಯ ಶಂಕರ್ ಕುರಿಯಾಜೆಯವರು ಕಾರ್ಯಕ್ರಮ ದ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ ವಿವರಕ್ಕಾಗಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ.