ಪದವಿ ಪೂರ್ವ ಶಿಕ್ಷಣ ಇಲಾಖೆ.ದ.ಕ, ಶ್ರೀ ಶಾರದ ಪದವಿಪೂರ್ವ ಮಹಿಳಾ ಕಾಲೇಜು ಸುಳ್ಯ, ದ.ಕ ಗೌಡ ವಿದ್ಯಾ ಸಂಘ ಸುಳ್ಯ ಇದರ ವತಿಯಿಂದ ಸುಳ್ಯ ತಾಲೂಕು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯು ಶಾರದ ಮಹಿಳಾ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಇದರಲ್ಲಿ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದೆ.
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಹೈಸ್ಕೂಲ್ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಏನೆಕಲ್ಲು ಹಾಗೂ ಪ್ರತೀಕ್ಷಾ.ಡಿ.ಎಸ್ ತರಬೇತಿ ನೀಡಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಚೆನ್ನಮ್ಮ ಪಿ. ಹಾಗೂ ಉಪನ್ಯಾಸಕ ರಂಜಿತ್ ಅಂಬೆಕಲ್ಲು ತಂಡದ ವ್ಯವಸ್ಥಾಪಕರಾಗಿ ಹಾಗೂ ಎಲ್ಲಾ ಉಪನ್ಯಾಸಕ ವೃಂದ ಸಹಕರಿಸಿದರು.
ಚೈತ್ರ , ಚರಿಷ್ಮಾ.ಪಿ.ಆರ್, ಮೇಘಶ್ರೀ. ಯಶೀಕ.ಹೆಚ್, ಕಾವೇರಿ, ದೀಕ್ಷಾ.ಹೆಚ್.ವಿ, ಗೀತಾ.ಸಿ, ಚೈತನ್ಯ, ಸ್ವಾತಿ.ಕೆ, ವಿಭಾಶ್ರೀ, ಹವ್ಯಶ್ರೀ ಚಿತ್ರದಲ್ಲಿದ್ದಾರೆ.