ವಿನೋಬನಗರ: ಗೂಡಂಗಡಿ ಬೀಗ ಮುರಿದು ಕಳ್ಳತನ-ಪೊಲೀಸ್ ದೂರು

Advt_Headding_Middle
Advt_Headding_Middle
Advt_Headding_Middle
Advt_Headding_Middle

ಗೂಡಂಗಡಿಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಹಣ ಹಾಗೂ ಅಂಗಡಿ ಸಾಮಾನುಗಳನ್ನು ಕಳ್ಳತನ ಮಾಡಿರುವ ಘಟನೆ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಫೆ.18ರಂದು ರಾತ್ರಿ ಸಂಭವಿಸಿದೆ.
ವಿನೋಬನಗರದಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಕೋನಡ್ಕ ಪದವಿನ ಸುಂದರ ನಾಯಕ್ ಅವರ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ ಸುಮಾರು ಎರಡು ಸಾವಿರ ನಗದು ಹಾಗೂ ಸುಮಾರು ಮೂರು ಸಾವಿರ ಮೌಲ್ಯದ ಸಿಗರೇಟು ಪ್ಯಾಕೇಟ್ ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಈ ಬಗ್ಗೆ ಅಂಗಡಿ ಮಾಲಕರು ಸುಳ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮರುದಿನ ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಂದರ ನಾಯಕ್ ಅವರ ಗೂಡಂಗಡಿಯಿಂದ ಈ ಹಿಂದೊಮ್ಮೆ ಹಗಲಿನ ಹೊತ್ತಿನಲ್ಲಿ ಹಣ ಕಳವು ನಡೆಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.