ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಫೆ.21 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಸಮಬಲ ಸಾಧಿಸಿದ್ದಾರೆ.
ಸೊಸೈಟಿಯ ಒಟ್ಟು 12 ನಿರ್ದೇಶಕರ ಆಯ್ಕೆಯಾಗಬೇಕಾಗಿತ್ತು. ಒಟ್ಟು 19 ನಾಮಪತ್ರ ಸಲ್ಲಿಕೆಯಾಗಿದ್ದವು. ಇದರಲ್ಲಿ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ದಯಾನಂದ ಅಡ್ಪಂಗಾಯ, ಎಸ್.ಟಿ. ಸ್ಥಾನ ಕ್ಕೆ ಲೀಲಾವತಿ ಬಾಲಕೃಷ್ಣ ನಾಯ್ಕ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಉಳಿದ 10 ಸ್ಥಾನಕ್ಕೆ 17 ಮಂದಿ ಸ್ಪರ್ಧಾ ಕಣದಲ್ಲಿ ಇದ್ದರು. ಫೆ. 21 ರಂದು ಚುನಾವಣೆ ನಡೆದು ಸಂಜೆ ಮತ ಎಣಿಕೆ ನಡೆದಾಗ ಕಾಂಗ್ರೆಸ್ ಬೆಂಬಲಿತ ರಾಹುಲ್ ಅಡ್ಪಂಗಾಯ ಬಳಗದಿಂದ ಸ್ಪರ್ಧಿ ಸಿದ ರಾಹುಲ್ ಅಡ್ಪಂಗಾಯ, ಜನಾರ್ದನ ನಾರಾಲು, ಬಾಲಚಂದ್ರ ಮುಡೂರು, ರಾಘವ ಅತ್ಯಾಡಿ, ವಿಜಯಲಕ್ಷ್ಮಿ ಪಡ್ಡಂಬೈಲು, ಶ್ವೇತಾ ಪುರುಷೋತ್ತಮ ಶಿರಾಜೆ ಗೆದ್ದು ನಿರ್ದೇಶಕರಾಗಿ ಆಯ್ಕೆಯಾದರು. ಬಿಜೆಪಿ ನಾಯಕರಾದ ವೆಂಕಟ್ರಮಣ ಅತ್ಯಾಡಿ, ನಾರಾಯಣ ಬಂಟ್ರಬೈಲು ನೇತ್ರತ್ವದಲ್ಲಿ ಸ್ಪರ್ಧೆ ಗಿಳಿದ 10 ಮಂದಿಯಲ್ಲಿ ವೆಂಕಟ್ರಮಣ ಅತ್ಯಾಡಿ, ದುರ್ಗೇಶ್ ಅಡ್ಪಂಗಾಯ, ಗುರುರಾಜ ಅಜ್ಜಾವರ, ನಳಿನಾಕ್ಷಿ ಅಡ್ಪಂಗಾಯ ಚುನಾವಣೆಯಲ್ಲಿ ಗೆದ್ದು ನಿರ್ದೇಶಕರಾದರು. ಈ ತಂಡದ ನಾರಾಯಣ ಬಂಟ್ರಬೈಲು, ಪರಮೇಶ್ವರ ನಾರಾಲು, ಲೋಕೇಶ ಅಡ್ಡಂತಡ್ಕ, ಸಾಂತಪ್ಪ ಗೌಡ ನಾರಾಲು, ಬಾಲಚಂದ್ರ ಅಡ್ಪಂಗಾಯ, ಪೂರ್ಣಿಮಾ ಮೂಡೂರು ಪರಾಭವಗೊಂಡರು. ರಾಹುಲ್ ಅಡ್ಪಂಗಾಯ ತಂಡದ ಎ.ಬಿ. ಅಶ್ರಫ್ ಪರಾಭವಗೊಂಡರು.
ಈ ಮೂಲಕ ಸೊಸೈಟಿ ಯ ಆಡಳಿತ ಮಂಡಳಿಯಲ್ಲಿ ಎರಡು ತಂಡದ ಸದಸ್ಯರು ಸಮಬಲ ಸಾಧಿಸಿರುವುದರಿಂದ ಅಧ್ಯಕ್ಷ ಯಾರಾಗುವರೆಂಬ ಕುತೂಹಲ ಮೂಡಿದೆ.
ಒಟ್ಟು 85 ಮತದಾರರು
ಹಾಲು ಸೊಸೈಟಿ ಯಲ್ಲಿ ಕಾಯಂ ಹಾಲು ಹಾಕುವವರಿಗೆ ಮತದಾನ ಇರುವುದಾಗಿ ಆ ಪ್ರಕಾರ ಮತದಾನ ಮಾಡುವವರ ಪಟ್ಟಿ ಸಿದ್ಧ ಪಡಿಸಲಾಯಿತು. ಅದರಲ್ಲಿ 56 ಮಂದಿಗೆ ಮಾತ್ರ ಮತದಾನ ಇತ್ತು. ಆದರೆ ರಾಹುಲ್ ಅಡ್ಪಂಗಾಯರು ನ್ಯಾಯಾಲಯಕ್ಕೆ ಹೋಗಿ ಹಾಲು ಸೊಸೈಟಿಯ ಸದಸ್ಯರಾಗಿದ್ದ 29 ಮಂದಿಗೆ ಮತದಾನದ ಹಕ್ಕು ಮಾಡಿಸಿದ್ದರೆಂದೂ ಇದರಿಂದ ಒಟ್ಟು ಮತದಾರರ ಸಂಖ್ಯೆ 85 ಆಯಿತು.