ಕುಯಿಂತೋಡು: ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗ್ರಾಮದ ಬೈಲೆ ಕುಯಿಂತೋಡುನಲ್ಲಿ ಆರಾಧ್ಯ ನಾಗ ದೇವರು ಉಳ್ಳಾಕುಲು ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಫೆ.19 ರಿಂದ 22ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯಿತು.

ಫೆ.19 ರಂದು ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನ, ಪ್ರಾರ್ಥನೆ, ದುರ್ಗಾ ಪೂಜೆ, ಭೂತ ಮಾರಣ ಬಲಿ, ಫೆ.2೦ರಂದು ಪವಮಾನ ಹೋಮ, ವಾಸ್ತು ಬಲಿ ಫೆ.21 ರಂದು ಗಣಹೋಮ ,ಪ್ರತಿಷ್ಠಾ ಹೋಮ, ನಾಗಪ್ರತಿಷ್ಠೆ , ರಕ್ತೇಶ್ವರಿ, ಮಲೆಚಾಮುಂಡಿ ದೈವಗಳ ಪ್ರತಿಷ್ಠೆ, ಮಹಾಪೂಜೆ ನಡೆಯಿತು.

ಫೆ.22ರಂದು ಶ್ರೀ ಉಳ್ಳಾಕುಲು ಪರಿವಾರ ದೈವಗಳ ಪ್ರತಿಷ್ಠೆ, ಮಲೆ ಉಳ್ಳಾಕುಳು ಮತ್ತು ಪರಿವಾರ ದೈವಗಳ ಪ್ರತಿಷ್ಠೆ ನಡೆದ ನಂತರ ಮಹಾಪೂಜೆ ನಡೆದು ನಂತರ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮಕ್ಕೆ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದರು, ಗೂನಡ್ಕ ಮುಖ್ಯ ರಸ್ತೆಯಿಂದ ವಿಶೇಷ ದ್ವಾರ ನಿರ್ಮಿಸಿ ಕುಯಿಂತೋಡು ಬೈಲೆ ತನಕ ಬಣ್ಣಗಳಿಂದ ರಸ್ತೆಯ ಎರಡು ಬದಿಯು ಅಲಂಕಾರವಾಗಿತ್ತು. ಕಾರ್ಯಕ್ರಮದ ರೂವಾರಿಗಳಾಗಿ ಸೋಮಶೇಖರ ಕೊಯಿಂಗಾಜೆ, ಕೆ.ಪಿ ಪ್ರಕಾಶ್, ಕೆ.ಸಿ ನಾರಾಯಣ, ಜಯರಾಮ ಅಬೀರ, ಕೆ.ಪಿ ಜಗದೀಶ, ವರದರಾಜ ಸಂಕೇಶ, ರಾಮಚಂದ್ರ ಕಲ್ಲುಗದ್ದೆನವೀನ್ ಕುಂಆರ್ ಕೆ.ಜೆ. ಎಸ್.ಪಿ ಮೋಹನ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.