Breaking News

ಅಜ್ಜಮೂಲೆಯಲ್ಲಿ ದೈವಗಳ ಜೀರ್ಣೋದ್ಧಾರ ಕುರಿತು ಪೂರ್ವಭಾವಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಅಜ್ಜಮೂಲೆಯ ಆದಿದ್ರಾವಿಡ ಕಾಲನಿಯಲ್ಲಿ ಶ್ರೀ ಧರ್ಮದೈವ ಮತ್ತು ಸಪರಿವಾರ ದೈವಗಳ ಸಾನಿಧ್ಯವಿದ್ದು, ಈ ಹಿಂದೆ ನಡೆದ ಪ್ರಶ್ನಾಚಿಂತನೆಯ ಪ್ರಕಾರ ದೈವ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯದ ಕುರಿತು ಪೂರ್ವಭಾವಿ ಸಭೆಯು ಫೆ.19 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ದೈವಗಳ ಜೀರ್ಣೋದ್ಧಾರದ ಬಗ್ಗೆ ಹಾಗೂ ದೈವಸ್ಥಾನ ನಿರ್ಮಾಣಕ್ಕೆ ಬೇಕಾದ ಅಗತ್ಯ ವಸ್ತುಗಳ ಕುರಿತು ಚರ್ಚಿಸಲಾಯಿತು.

ವಾಸ್ತುಶಿಲ್ಪತಜ್ಞರಾದ ವಾಸುದೇವ ಆಚಾರ್ಯ ಕಿಲಂಗೋಡಿ ಇವರ ನೇತೃತ್ವದಲ್ಲಿ ದೈವಸ್ಥಾನಕ್ಕೆ ಜಾಗ ಗುರುತು ನಡೆಸಿ ನೆಲವನ್ನು ಸಮತಟ್ಟುಗೊಳಿಸಲಾಯಿತು. ಇದರ ಸಲುವಾಗಿ ಪ್ರಾರ್ಥನೆಯನ್ನು ಶೇಣಿಯ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾದ ಧರ್ಮಪಾಲ ಬಿ.ಕೆ. ನಡೆಸಿದರು.

ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಅಧ್ಯಕ್ಷ ದೇವಿಪ್ರಸಾದ್ ಕೊಪ್ಪತಡ್ಕ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಬಾಳಿಲ, ಸುಜಾತ ಪವಿತ್ರಮಜಲು, ಸತ್ಯವೆಂಕಟೇಶ್ ಹೆಬ್ಬಾರ್, ಸುದೇಷ್ಣ ದೇರಾಜೆ, ರಾಮಕೃಷ್ಣ ಭಟ್ ಅಜ್ಜಮೂಲೆ, ಬಾಲಕೃಷ್ಣ ಬೊಳ್ಳೂರು, ರತಿನ್ ಚೂಂತಾರು, ಲಿಂಗಪ್ಪ ಚೂಂತಾರು, ಶಿವಪ್ಪ ಕೋಡ್ತಿಲು ಹಾಗೂ ಅಜ್ಜಮೂಲೆ ಕಾಲನಿಯ ನಿವಾಸಿಗಳು ಮತ್ತು ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.