ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಗೌರವಾಧ್ಯಕ್ಷ ವೇದಮೂರ್ತಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ 80ನೇ ಹುಟ್ಟು ಹಬ್ಬದ ಸಂಭ್ರಮ ಮಾ. 1ರಂದು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 6.00ಗಂಟೆಗೆ ಮಹಾಗಣಪತಿ ಹವನ ಸೇರಿದಂತೆ ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಬೆಳಿಗ್ಗೆ 9.30ರಿಂದ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಚೊಕ್ಕಾಡಿ ಹವ್ಯಕ ವಲಯ ಮತ್ತು ಜೆಸಿಐ ಬೆಳ್ಳಾರೆ ಇವುಗಳ ಆಶ್ರಯದಲ್ಲಿ ವೆನ್ ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 10.30ರಿಂದ ಎಮ್. ವಿ. ಶಂಕರ ಭಟ್ಟ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು, ಲಕ್ಷ್ಮೀನಾರಾಯಣ ಭಟ್ಟರ ಜೀವನ ಚರಿತ್ರೆ ಹಾಗೂ ಬಂಧು ವರ್ಗದವರ ಅನಿಸಿಕೆಗಳನ್ನೊಳಗೊಂಡ ಕೃತಿಯನ್ನು ಸಾಹಿತಿ ಸುಬ್ರಾಯ ಚೊಕ್ಕಾಡಿ ಬಿಡುಗಡೆಗೊಳಿಸಲಿದ್ದಾರೆ.
ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಷಿ ಮತ್ತು ಹಿರಿಯರಾದ ಆನೆಕಾರ ಗಣಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಕ ರಾಮಕೃಷ್ಣ ಚೂಂತಾರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಮಧ್ಯಾಹ್ನ ಭೋಜನದ ಬಳಿಕ 2.00 ಗಂಟೆಗೆ ಯಕ್ಷಗಾನ ತಾಳಮದ್ದಳೆ ತ್ರೈಂಬಕ ರುದ್ರ ಮಹಾತ್ಮೆ ನಡೆಯಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯಕೃಷ್ಣ ಪದ್ಯಾಣ ಮತ್ತು ಅಂಬಾತನಯ ಅರ್ನಾಡಿ ಭಾಗವಹಿಸಲಿದ್ದಾರೆ. ಕೆ. ಗೋವಿಂದ ಭಟ್, ಡಾ. ಎಂ. ಪ್ರಭಾಕರ ಜೋಷಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಸರ್ಪಂಗಳ ಈಶ್ವರ ಭಟ್, ವಾಸುದೇವ ರಂಗ ಭಟ್, ರವಿರಾಜ ಪಣೆಯಾಲ ಮುಮ್ಮೇಳ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆಯಿಂದ ನಡೆಯಲಿರುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆಯೆಂದು ಚೂಂತಾರು ಕುಟುಂಬದ ಮಹೇಶ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.