ಸಾಹಿತ್ಯ ಕೃತಿಗಳ ಬಿಡುಗಡೆ , ಸಾಧಕರಿಗೆ ಪ್ರಶಸ್ತಿ – ಬಿರುದು ಪ್ರದಾನ , ರಾಜ್ಯಮಟ್ಟದ ಕವಿಗೋಷ್ಠಿ
ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಸಂಭ್ರಮ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಹಾಗೂ ಸಾಹಿತಿ , ಜ್ಯೋತಿಷಿ ಎಚ್ ಭೀಮರಾವ್ ವಾಷ್ಠರ್ ಅವರ 45 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಪ್ರಯುಕ್ತ ಕವಿ ಸಂಗಮ – ಕವಿ ಸಂಭ್ರಮ -2021 ಸಾಹಿತ್ಯ ಸಮಾರಂಭವು ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕ ಮಾತಾಡಿದರು . ಸಭಾಧ್ಯಕ್ಷತೆಯನ್ನು ಸುಜಯ ಕೃಷ್ಣಪ್ಪ ವಹಿಸಿದ್ದರು. ಸುಳ್ಯದ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಮೋಹನ್ ನಂಗಾರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ರಾಯಚೂರಿನ ಹಿರಿಯ ಸಾಹಿತಿ ಮಹಾಂತಪ್ಪ ಮೇಟಿ ಗೌಡರವರು ಎಚ್ . ಭೀಮರಾವ್ ವಾಷ್ಠರ್ ರವರ ಚಂದನ ಕುಸುಮ ಸಾಹಿತ್ಯ ಕೃತಿ ಬಿಡುಗಡೆ ಮಾಡಿದರು .ಸಿಂಧನೂರಿನ ಶರಭಯ್ಯ ಸ್ವಾಮೀ ರವರು ಬೆಂಗಳೂರಿನ ಗೋವಿಂದರಾಜು ಬಿವಿ ರವರ ಪ್ರಥಮ ಹೆಜ್ಜೆ ಕೃತಿ ಬಿಡುಗಡೆಗೊಳಿಸಿದರು.
ಚಂದನ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಮಂಜುನಾಥ ಮೇಸ್ತ್ರಿ , ಸಾನು ಉಬರಡ್ಕ , ಹಿರಿಯ ಸಾಹಿತಿಗಳಾದ ಪದ್ಮನಾಭ್ ಬೆಂಗಳೂರು , ಗುರು ಢವಳೇಶ್ವರ ಹುಬ್ಬಳ್ಳಿ , ಹರಿನರಸಿಂಹ್ ಉಪಾಧ್ಯಾಯ ಬೆಂಗಳೂರು , ಆಶಾ ಮಯ್ಯ ಪುತ್ತೂರು , ಹಾ ಮ ಸತೀಶ್ ಬೆಂಗಳೂರು , ವಿಜಯ್ ದಾಸ್ ನವಲಿ ರಾಯಚೂರು , ನಾರಾಯಣ್ ರೈ ಕುಕ್ಕುವಳ್ಳಿ ಪುತ್ತೂರು ,ಚಿತ್ರನಟರಾದ ಅಶೋಕ್ ಕುಮಾರ್ ಕಾಸರಗೋಡು ಮತ್ತು ವೈಲೇಶ್ ಕೊಡಗು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಪ್ರೇಮಾ ಉದಯ್ ಕುಮಾರ್ ಐವರ್ನಾಡು ಅವರಿಗೆ ಚಂದನ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ರವರಿಗೆ ಚಂದನ ಕಾವ್ಯಶ್ರೀ ಪ್ರಶಸ್ತಿ , ಕೆ ಜೆ ರತ್ನ ಜೈನ್ ಮಂಡ್ಯ ರಿಗೆ ಚಂದನ ಪ್ರತಿಭಾ ರತ್ನ ಪ್ರಶಸ್ತಿ ಮತ್ತು ಸಮ್ಯಕ್ತ್ ಜೈನ್ ಕಡಬ ರವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಸಿದ್ಧ ಚಿತ್ರಕಲಾವಿದರಾದ ಬಿ ಕೆ ಮಾಧವರಾವ್ ಮಂಗಳೂರು ಅವರಿಗೆ ಚಂದನ ಚಿತ್ರಕಲಾ ರತ್ನ ಬಿರುದು ಮತ್ತು ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ಅವರಿಗೆ ಕರುನಾಡ ಗಾನಗಂಧರ್ವ ಬಿರುದು ನೀಡಿ ಸನ್ಮಾನಿಸಲಾಯಿತು .
ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ವಾರದ ಶ್ರೇಷ್ಠ ಗಾಯಕ ಮಾಲಿಕೆಯ ವಿಜೇತ ಗಾಯಕರಿಗೆ ಸಂಗೀತ ರತ್ನ ಪುರಸ್ಕಾರ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಚಂದನ ಸಂಗೀತ ರಸಮಂಜರಿ ನಡೆಯಿತು .ಚಂದನ ಹಿರಿಯ ಸಾಹಿತಿಗಳ ಗೋಷ್ಠಿಯಲ್ಲಿ ನಾಡಿನ ಹಿರಿಯ ಸಾಹಿತಿಗಳು ಭಾಗವಹಿಸಿದ್ದರು .ಮಾ | ಉಜ್ವಲ್ ವಾಷ್ಠರ್ ರಿಂದ ಕೀಬೋರ್ಡ್ ವಾದನ ನಡೆಯಿತು . ಭೀಮರಾವ್ ವಾಷ್ಠರ್ ಜನ್ಮ ದಿನಾಚರಣೆ ಪ್ರಯುಕ್ತ 45 ಹಣತೆಗಳನ್ನು ಗಣ್ಯರು ಬೆಳಗಿಸಿದರು . ನಂತರ ಉಬರಡ್ಕದ ಖ್ಯಾತ ಕವಯಿತ್ರಿ ಅನುರಾಧಾ ಶಿವಪ್ರಕಾಶ್ ರವರ ಅದ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸದ್ಭಾವನಾ ಕವಿಗೋಷ್ಠಿ ನಡೆಯಿತು . ಉದ್ಘಾಟನೆಯನ್ನು ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ವಹಿಸಿದ್ದರು .
45 ಜನ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು .ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ದವರು ಮತ್ತು ಚಂದನ ಸಾಹಿತ್ಯ ವೇದಿಕೆಯ ಹಿರಿಯ ಸಾಹಿತಿಗಳು ಎಚ್ .ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಿದರು. ಹರ್ಷಿತಾ ಕೆ ಎಸ್ ಪ್ರಾರ್ಥನೆ ಹಾಡಿದರು. ವಿಜಯಕುಮಾರ್ ಕಾಣಿಚಾರ್ ಮತ್ತು ಮಮತಾ ರವೀಶ್ ಸ್ವಾಗತಿಸಿದರು .ಸುಮಾ ಕಿರಣ ಮತ್ತು ಎಮ್ ಎ ಮುಸ್ತಫಾ ವಂದಿಸಿದರು . ಅರುಣ್ ಜಾಧವ್ ಕೇರ್ಪಳ , ಜ್ಯೋತಿಭಾ ಚಿಲ್ಲಣ್ಣವರ, ರತ್ನತನಯ ಮಂಜುನಾಥ್ , ಪೆರುಮಾಳ್ ಲಕ್ಷ್ಮಣ ಐವರ್ನಾಡು ಮತ್ತು ಹರಿಪ್ರಸಾದ್ ಸುಳ್ಯ ಸಹಕರಿಸಿದರು . ಲತಾಶ್ರೀ ಸುಪ್ರೀತ್ , ಸುಮಂಗಲ ಲಕ್ಷ್ಮಣ್ ಕೋಳಿವಾಡ ಮತ್ತು ಪಿ ಎಮ್ ಇಕ್ಬಾಲ್ ಕೈರಂಗಳ ನಿರೂಪಿಸಿದರು